ಮೃತ ಬೊನು ಕೋಮಾಲಿ, ಕೋಮಾಲಿಯ ವೈಯಕ್ತಿಕ ಡೈರಿ
- ಅತ್ಮಹತ್ಯೆಗೆ ಶರಣಾದ ಬೊನು ಕೋಮಾಲಿ
- ಪೊಲೀಸ್ ವಿಚಾರಣೆ ವೇಳೆ ಕೋಮಾಲಿಯ ವೈಯಕ್ತಿಕ ಡೈರಿ ಪತ್ತೆ
- ನಿನ್ನನ್ನು ಬಿಟ್ಟು ಹೇಗೆ ಬದುಕಿರಲಿ ಎಂದು ಬರೆದಿದ್ದ ಕೋಮಾಲಿ
ತೆಲಂಗಾಣ: ಸದ್ಯ ದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ಯೂಟ್ಯೂಬರ್ ಬೊನು ಕೋಮಾಲಿ (Bonu Komali) ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಬೆಳವಣಿಗೆಯೊಂದು ಕಂಡುಬಂದಿದೆ.
ತಲಂಗಾಣಾದ ತನ್ನ ಅಪಾರ್ಟ್ಮೆಂಟ್ನಲ್ಲಿ ಕೋಮಾಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ಪೊಲೀಸರು ತನಿಖೆ ಮುಂದುವರೆಸುತ್ತಿದ್ದು, ಈಗ ಬೊನು ಅವರ ವೈಯಕ್ತಿಕ ಡೈರಿ ಪತ್ತೆಯಾಗಿದೆ.
ಕೋಮಾಲಿ ತನ್ನ ತೆಲಂಗಾಣ ಮೂಲದ ಸಾಪ್ಟ್ವೇರ್ ಇಂಜಿನಿಯರ್ ಒಬ್ಬನನ್ನು ಸುಮಾರು 3 ವರ್ಷಗಳಿಂದ ಪ್ರೀತಿಸುತ್ತಿದ್ದಳು ಎಂದು ಅವಳ ಡೈರಿ ಮೂಲಕ ತಿಳಿದುಬಂದಿದೆ. ನಾನು ನಿನ್ನಿಂದ ದೂರವಾಗಲು ನನಗೆ ಭಯವಾಗುತ್ತಿದೆ, ನೀನು ನನ್ನನು ಬಿಟ್ಟು ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ, ನಿನ್ನನ್ನು ಬಿಟ್ಟು ನಾನು ಜೀವನವನ್ನು ಹೇಗೆ ನಡೆಸಲಿ? ಎಂದು ಕೋಮಾಲಿ ತನ್ನ ಡೈರಿಯಲ್ಲಿ ಬರೆದುಕೊಂಡಿದ್ದಾಳೆ.
ನೀನು ಇಂದು ನನ್ನನ್ನ ಬಿಟ್ಟು ಹೋಗಿರಬಹುದು, ಆದರೆ ಒಂದಲ್ಲಾ ಒಂದು ದಿನ ನೀನು ನನಗಾಗಿ ಮರಳಿ ಬರುವೆ ಎಂದು ನಾನು ನಂಬಿದ್ದೇನೆ. ನಿನ್ನ ಮರಳುವಿಕೆಗಾಗಿ ನಾನು ಕಾಯುತ್ತಿರುತ್ತೇನೆ, ಅವನು ಮತ್ತೆ ನನ್ನನ್ನು ಹುಡುಕಿ ಬಂದರೆ ನಾನು ಏನು ಮಾಡಬೇಕೆಂದು ನನಗೆ ತಿಳಿಯಲಾಗಿದೆ ಎಂದು ಕೊಮಾಲಿ ತನ್ನ ಡೈರಿಯಲ್ಲಿ ಬರೆದಿದ್ದಾಗಿ ಪೊಲೀಸರಿಂದ ಮಾಹಿತಿ ಹೊರಬಿದ್ದಿದ್ದೆ.
ತಾಯಿಗೆ ಕೊನೆಯ ಸಂದೇಶ!
ಬೊನು ಕೋಮಾಲಿ ಆತ್ಮಹತ್ಯೆಗೆ ಸಜ್ಜಾಗುವ ಮೊದಲು, ಕುವೈತ್ನಲ್ಲಿರುವ ತನ್ನ ತಾಯಿ ಬಿ. ಸತ್ಯಾ ವರಲಕ್ಷ್ಮೀ ಅವರಿಗೆ, ಐ ಲವ್ ಯೂ ಮಮ್ಮಿ, ತಮ್ಮನನ್ನು ಚೆನ್ನಾಗಿ ನೋಡಿಕೊ ಎಂದು ಕೊನೆಯ ಸಂದೇಶ ಕಳುಹಿಸಿದ್ದಾಳೆ.
ಮಗಳ ಈ ಸಂದೇಶದಿಂದ ಗಾಬರಿಯಾದ ತಾಯಿ ತನ್ನ ಸ್ನೇಹಿತರನ್ನು ಮಗಳು ವಾಸವಿದ್ದ ಮನೆಗೆ ಕಳುಹಿಸಿದ್ದಾರೆ. ಅವರು ಬಾಗಿಲನ್ನು ಒಡೆದು ಮನೆಯನ್ನು ಪ್ರವೇಶಿಸಿದಾಗ ಕೋಮಾಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಕೋಮಾಲಿ
ಬಾನು ಕೋಮಾಲಿ ಇವಳು ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದು, ಇದರ ಜೊತೆಗೆ ಯೂಟ್ಯೂಬ್ನಲ್ಲಿ ಸಹ ಜೀವನಶೈಲಿ ಮತ್ತು ದಿನನಿತ್ಯದ ವ್ಲಾಗ್ ಮಾಡುವ ಮೂಲಕ ಖ್ಯಾತಿಯನ್ನು ಗಳಿಸಿದ್ದಳು. ಕೊಮಾಲಿ 27 ವರ್ಷದ ಸಾಪ್ಟ್ವೇರ್ ಇಂಜಿನಿಯರ್ ಹಾಗೂ ಯೂಟ್ಯೂಬ್ರ್ ಒಬ್ಬನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಆರು ತಿಂಗಳ ಹಿಂದೆ ಕೋಮಾಲಿ ಆತ್ಮಹತ್ಯೆಗೆ ಯತ್ನಿಸಿದ್ದಳು, ಆದರೆ ಈ ಭಾರಿ ಆಕೆ ತನ್ನ ಪ್ರಾಣವನ್ನು ತನೇ ತೆಗೆದುಕೊಂಡಿದ್ದಾಳೆ.
ಪೊಲೀಸರಿಂದ ಮುಂದುವರೆದ ತನಿಖೆ
ಆದರೆ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವೆಂದು ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದು, ಸದ್ಯ ಕೋಮಾಲಿಯ ಶವವನ್ನು ವಪರೀಕ್ಷೆಗಾಗಿ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ಕೋಮಾಲಿಯ ಸ್ನೇಹಿತರ, ನೆರೆಹೊರೆಯವರ ಮತ್ತು ಪರಿಚಿತರ ಹೇಳಿಕೆ ಹಾಗೂ ವಿಚಾರಣೆಯನ್ನು ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜನ್ಸೀಸ್).