ದೇಶ

ರಾವಣನ ಪೋಸ್ಟರ್​​ನಲ್ಲಿ ರಾಹುಲ್, ಅಖಿಲೇಶ್!...ಆ ಹತ್ತು ತಲೆಗಳಲ್ಲಿ ಇರುವ ವಿದೇಶಿಗರು ಯಾರು ಗೊತ್ತಾ...? | Anti-India Ravana Poster

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಕಾಣಿಸಿಕೊಂಡಿರುವ ವಿವಾದಾತ್ಮಕ ಪೋಸ್ಟರ್‌ಗಳು ಇಡೀ ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಭೂವಿರೋಧಿ/ಭಾರತ ವಿರೋಧಿ ದಶಾನನ ರಾವಣ (Anti-India Dashanan Ravana) ಎಂಬ ಶೀರ್ಷಿಕೆಯಡಿ ಅಂಟಿಸಲಾಗಿರುವ ಈ ಪೋಸ್ಟರ್‌ಗಳು ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ.

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಕಾಣಿಸಿಕೊಂಡಿರುವ ವಿವಾದಾತ್ಮಕ ಪೋಸ್ಟರ್‌ಗಳು ಇಡೀ ನಗರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ನಗರದ ವಿವಿಧ ಪ್ರಮುಖ ವೃತ್ತಗಳಲ್ಲಿ ಭೂವಿರೋಧಿ/ಭಾರತ ವಿರೋಧಿ ದಶಾನನ ರಾವಣ (Anti-India Dashanan Ravana) ಎಂಬ ಶೀರ್ಷಿಕೆಯಡಿ ಅಂಟಿಸಲಾಗಿರುವ ಈ ಪೋಸ್ಟರ್‌ಗಳು ಸಾರ್ವಜನಿಕ ವಲಯದಲ್ಲಿ ಭಾರೀ ಸಂಚಲನ ಮೂಡಿಸಿವೆ.

ಸನಾತನ ರಕ್ಷಾ ಸಂಘಟನೆ ಎಂಬ ಸಂಘಟನೆಯು ಈ ಪೋಸ್ಟರ್‌ಗಳನ್ನು ಹಾಕಿದೆ ಎಂದು ವರದಿಯಾಗಿದ್ದು, ದೇಶದ ಪ್ರಮುಖ ರಾಜಕಾರಣಿಗಳು ಹಾಗೂ ಜಾಗತಿಕ ವ್ಯಕ್ತಿಗಳ ಮುಖಗಳನ್ನು ರಾವಣನ ಹತ್ತು ತಲೆಗಳ ರೂಪದಲ್ಲಿ ಬಿಂಬಿಸಲಾಗಿದೆ.

ಪೋಸ್ಟರ್‌ನಲ್ಲಿ ಇರುವವರು ಇವರೇ ನೋಡಿ!

ಈ ವಿವಾದಾತ್ಮಕ ಪೋಸ್ಟರ್‌ನಲ್ಲಿ ಒಟ್ಟು 10 ವ್ಯಕ್ತಿಗಳ ಮುಖಗಳನ್ನು ರಾವಣನ ಹತ್ತು ತಲೆಗಳಾಗಿ ತೋರಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಗ್ಯಾಂಗ್​ಸ್ಟರ್​ ಅತಿಕ್ ಅಹ್ಮದ್, ಉದ್ಯಮಿ ಎಲಾನ್ ಮಸ್ಕ್, ಅಮೆರಿಕದ ಸಂಸದೆ ಇಲ್ಹಾನ್ ಒಮರ್, ಬಾಂಗ್ಲಾದೇಶದ ನಾಯಕ ಮುಹಮ್ಮದ್ ಯೂನುಸ್, ಹೂಡಿಕೆದಾರ ಜಾರ್ಜ್ ಸೊರೊಸ್, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಮತ್ತು ಮತ್ತೊಬ್ಬ ಗ್ಯಾಂಗ್‌ಸ್ಟರ್ ಮುಖ್ತಾರ್ ಅನ್ಸಾರಿ ಸೇರಿದಂತೆ ಇತರೆ ವ್ಯಕ್ತಿಗಳ ಚಿತ್ರಗಳಿವೆ. ಈ ವ್ಯಕ್ತಿಗಳೆಲ್ಲರೂ ಭಾರತದ ವಿರುದ್ಧದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ದೇಶದ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಸಂಘಟನೆಯು ಪೋಸ್ಟರ್ ಮೂಲಕ ಗಂಭೀರ ಆರೋಪ ಮಾಡಿದೆ.

ಪೋಸ್ಟರ್‌ಗಳನ್ನು ಪ್ರದರ್ಶಿಸಿರುವ ಸನಾತನ ರಕ್ಷಾ ಸಂಘಟನೆಯು, ಇದರಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ವಿವಾದಾತ್ಮಕ ಮತ್ತು ಗಂಭೀರ ಆರೋಪಗಳನ್ನು ಹೊರಿಸಿದೆ. ಭಾರತದ ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡಲು ಇವರುಗಳ ಪಾತ್ರವಿದೆ ಎಂದು ಸಂಘಟನೆ ದೂರಿದೆ.

ಇದನ್ನೂ ಓದಿ:ಕೋಲ್ಕತ್ತಾ ಕಾಲ್ತುಳಿತ ಪ್ರಕರಣ: ಆಯೋಜಕರು ಸೇರಿದಂತೆ 7 ಜನರ ಬಂಧನ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ ಬಂಗಾಳ ಸರ್ಕಾರ! | Kolkata Stampede

ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳು ಹಾಗೂ ಅಮೆರಿಕದ ಸಂಸದೆ ಇಲ್ಹಾನ್ ಒಮರ್ ಅವರ ಭಾರತ ವಿರೋಧಿ ಹೇಳಿಕೆಗಳು ಮತ್ತು ಅವರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭೇಟಿಯನ್ನು ಈ ಪೋಸ್ಟರ್‌ಗಳಲ್ಲಿ ಉಲ್ಲೇಖಿಸಿ ಟೀಕಿಸಲಾಗಿದೆ. ಹಾಗೆಯೇ, ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾವಣೆಯ ನಂತರ ಮುಹಮ್ಮದ್ ಯೂನುಸ್ ವಹಿಸಿದ ಪಾತ್ರ ಹಾಗೂ ಭಾರತದ ಈಶಾನ್ಯ ರಾಜ್ಯಗಳ ಕುರಿತು ಅವರು ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಗಳನ್ನು ಮುನ್ನೆಲೆಗೆ ತರಲಾಗಿದೆ. ಜಾಗತಿಕ ಶತಕೋಟಿಪತಿ ಜಾರ್ಜ್ ಸೊರೊಸ್ ಅವರು ಭಾರತವನ್ನು ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಂಘಟನೆಯು ಆರೋಪಿಸಿದೆ.

ಅಖಿಲೇಶ್ ಮತ್ತು ಪ್ರಶಾಂತ್ ಭೂಷಣ್ ಟಾರ್ಗೆಟ್​

ಈ ಪೋಸ್ಟರ್‌ಗಳಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್​ರನ್ನು ಸಹ ಗುರಿಯಾಗಿಸಲಾಗಿದ್ದು, ಭಾರತದಲ್ಲಿ ದಂಗೆಯ ಕುರಿತು ಮಾತನಾಡಿದ ವ್ಯಕ್ತಿಗಳೊಂದಿಗೆ ಅಖಿಲೇಶ್ ಯಾದವ್ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಸನಾತನ ರಕ್ಷಾ ಸಂಘಟನೆ ಆರೋಪಿಸಿದೆ. ಇದರೊಂದಿಗೆ, ಸಾರ್ವಜನಿಕವಾಗಿ ದಂಗೆಯನ್ನು ಬೆಂಬಲಿಸುವ ರೀತಿಯಲ್ಲಿ ಪ್ರಶಾಂತ್ ಭೂಷಣ್ ಹೇಳಿಕೆಗಳನ್ನು ನೀಡಿದ್ದಾರೆ ಎಂದೂ ಪೋಸ್ಟರ್‌ನಲ್ಲಿ ದೂರಲಾಗಿದೆ.

ಲಖನೌ ನಗರದ ಹಲವು ಜನನಿಬಿಡ ವೃತ್ತಗಳಲ್ಲಿ ಕಾಣಿಸಿಕೊಂಡಿರುವ ಈ ಪೋಸ್ಟರ್‌ಗಳು ಸಂಚಾರ ಮಾಡುವವರ ಹಾಗೂ ಸ್ಥಳೀಯರ ಗಮನ ಸೆಳೆದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿವೆ. ಒಂದು ಕಡೆ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡು ಈ ರೀತಿಯ ಪೋಸ್ಟರ್‌ಗಳನ್ನು ಹಾಕಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ಜಾಗತಿಕ ಮಟ್ಟದ ಉದ್ಯಮಿಗಳು ಹಾಗೂ ನಾಯಕರ ಹೆಸರುಗಳೂ ಇದರಲ್ಲಿ ಸೇರಿರುವುದು ಅಚ್ಚರಿಗೆ ಕಾರಣವಾಗಿದೆ.

ಆದಾಗ್ಯೂ, ಸನಾತನ ರಕ್ಷಾ ಸಂಘಟನೆಯು ಈ ವ್ಯಕ್ತಿಗಳ ಮೇಲೆ ಮಾಡಿರುವ ಆರೋಪಗಳು ಸಂಪೂರ್ಣವಾಗಿ ಆ ಸಂಘಟನೆಯ ಆರೋಪಗಳಾಗಿವೆ. ಈ ವಿವಾದಾತ್ಮಕ ಬೆಳವಣಿಗೆಯ ಕುರಿತು ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್​).