ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಇದರಲ್ಲಿ ಸ್ಪರ್ಧಿಗಳಾದ ವಿನಯ್, ಸ್ನೇಹಿತ್ ಹಾಗೂ ನಮ್ರತಾ ನಡುವೆ ಒಳ್ಳೆಯ ಫ್ರೆಂಡ್ಶಿಪ್ ಇದ್ದು, ಮೂವರು ಒಂದೇ ಗ್ಯಾಂಗ್ನಲ್ಲಿ ಕಾಣಿಸಿಕೊಂಡಿದ್ದರು.
ನಮ್ರತಾ ಅವರಿಗೆ ಈಗಾಗಲೇ ಚಮಚಾ ಎಂಬ ಹಣೆಪಟ್ಟಿ ಕೊಡಲಾಗಿದ್ದು, ಪದೇ ಪದೇ ಈ ಬಗ್ಗೆ ಕಿವಿಮಾತು ಬರುತ್ತಲೇ ಇತ್ತು. ಆದರೆ, ಅವರು ಇದನ್ನು ನಿರ್ಲಕ್ಷ್ಯ ಮಾಡಿದ್ದರು. ಈಗ ಅವರು ಬದಲಾದಂತೆ ಕಾಣುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಇಂದಿನ ಸಂಚಿಕೆಯಲ್ಲಿ ನಮ್ರತಾ ಅವರು ಅಚ್ಚರಿಯ ನಿರ್ಧಾರ ಒಂದನ್ನು ಪ್ರಕಟಿಸಿ ಸ್ಪರ್ಧಿಗಳು ಹಾಗೂ ವೀಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಹೊರಗೆ ನಡೆದ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿದ್ದಾರೆ. ನೀವು ಇನ್ನೂ ವಿನಯ್ ಅವರ ನೆರಳಲ್ಲೇ ಇದ್ದೀರಿ ಎಂದು ಪವಿ ಅವರು ನಮ್ರತಾಗೆ ಹೇಳಿದರು. ಇದನ್ನು ನಮ್ರತಾ ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿದೆ.
ಇದನ್ನೂ ಓದಿ: ಐಪಿಎಲ್ 2024| ಕೆಕೆಆರ್ ಮೆಂಟರ್ ಆದ ಬಳಿಕ ಗೌತಮ್ ಗಂಭೀರ್ ಫಸ್ಟ್ ರಿಯಾಕ್ಷನ್; ತಂಡದ ಕುರಿತು ಹೇಳಿದ್ದಿಷ್ಟು
ಈ ವಾರದ ಟಾಸ್ಕ್ಗಳಲ್ಲಿ ನಮ್ರತಾ ಗೌಡ ವಿನಯ್ ಅವರ ತಂಡದಿಂದ ದೂರ ಉಳಿದಿದ್ದು, ಪ್ರತಾಪ್ ಅವರ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. ಟಾಸ್ಕ್ ಆಡುವ ವೇಳೆ ಅವರು ಅಚ್ಚರಿಯ ನಿರ್ಧಾರ ಒಂದನ್ನು ಪ್ರಕಟಿಸಿದ್ದು, ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಿಂದ ಒಬ್ಬರನ್ನು ಹೊರಗೆ ಇಡಿ ಎಂದು ಬಿಗ್ ಬಾಸ್ ಕಡೆಯಿಂದ ಆದೇಶ ಬಂದಾಗ ಅವರು ವಿನಯ್ ಹೆಸರನ್ನು ಸೂಚಿಸಿದ್ದಾರೆ.
ಅವರಿಗೆ ಕೋಪ ಜಾಸ್ತಿ ಇರುವ ಕಾರಣ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ನಮ್ರತಾ ಕಾರಣ ಕೊಟ್ಟಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇತ್ತ ನಮ್ರತಾ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ, ಈ ಜರ್ನಿಯಲ್ಲಿ ಯಾರೂ ಬರಲ್ಲ ಅನ್ನೋ ಸತ್ಯ ಇವತ್ತು ಗೊತ್ತಾಯ್ತು ಎಂದು ಹೇಳುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.