ನರಸಿಂಗ್‌ಪುರ: ಮುಸ್ಲಿಂ ಯುವಕನೊಬ್ಬ ಪ್ರೀತಿಸಿದವಳ ಕೈಹಿಡಿಯಲು ಹಿಂದೂ ಧರ್ಮ ಸ್ವೀಕರಿಸಿದ ಘಟನೆ ಮಧ್ಯಪ್ರದೇಶದ ನರಸಿಂಗ್‌ಪುರ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ನಿಮ್ಮ ಕೊಡುಗೆ ಅಪಾರ: ಬಿ.ಎಲ್. ಸಂತೋಷ್ ಕಾಲೆಳೆದ ಎಂ.ಬಿ. ಪಾಟೀಲ್
ಮೂಲತಃ ನರಸಿಂಗ್‌ಪುರ ನಿವಾಸಿಯಾಗಿರುವ ಫಾಜಿಲ್ ಖಾನ್ ತನ್ನ ಗೆಳತಿ ಸೋನಾಲಿಯನ್ನು ಬಹು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆತ ಆಕೆಯನ್ನು ವಿವಾಹವಾಗಲು ಬಯಸಿ ಗುರುವಾರದಂದು ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಹೆಸರನ್ನು ಅಮನ್ ರೈ ಎಂದು ಬದಲಿಸಿಕೊಂಡಿದ್ದಾನೆ. ಕರೇಲಿರಾಮ್ ದೇವಾಲಯದಲ್ಲಿ ಸೋನಾಲಿ ಹಾಗೂ ಅಮನ್ ರೈ ವಿವಾಹವು ನೆರವೇರಿದ್ದು, ಮದುವೆಗೆ ಎರಡು ಮನೆಯವರು ಸಾಕ್ಷಿಯಾಗಿದ್ದಾರೆ.
ಅಲ್ಲದೇ, ಈಗಾಗಲೇ ವಿವಾಹ ನೋಂದಣಿಗಾಗಿ ಈ ದಂಪತಿಗಳು ಅರ್ಜಿಯನ್ನು ಸಹ ಸಲ್ಲಿಸಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಅಮನ್ ತಂದೆ ಮೊದಲು ಹಿಂದೂವಾಗಿದ್ದರು. ಆದರೆ ಅವನ ತಾಯಿ ಮುಸ್ಲಿಂ ಆಗಿದ್ದಳು. ಹಲವು ವರ್ಷಗಳ ಹಿಂದೆ ಹಿಂದೂ ಧರ್ಮವನ್ನು ತೊಡೆದು ಇಸ್ಲಾಂಗೆ ಮತಾಂತರಗೊಂಡು ವಿವಾಹವಾಗಿದ್ದರು.
ಇದನ್ನೂ ಓದಿ: ಲಂಚ ಆರೋಪ ಹಿನ್ನಲೆ, ಸಿಬ್ಬಂದಿಯಿಂದ ಮರಣೋತ್ತರ ಪರೀಕ್ಷೆ ನಡೆಸದೆ ಪ್ರತಿಭಟನೆ!
ಈ ಬಗ್ಗೆ ಮಾತನಾಡಿದ ಅಮನ್, ನನ್ನ ತಂದೆ ನನ್ನ ತಾಯಿಗಾಗಿ ಧರ್ಮವನ್ನು ಬದಲಾಯಿಸಿದ್ದರು. ನಾನು ನನ್ನ ಹೆಂಡತಿಗಾಗಿ ನನ್ನ ಧರ್ಮವನ್ನು ಬದಲಾಯಿಸಿದ್ದೇನೆ ಎಂದು ಮುಗುಳ್ನಕ್ಕು ಹೇಳಿದ್ದಾರೆ.(ಏಜೆನ್ಸೀಸ್)