ನ್ಯೂಸ್

ಪಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಗೆ ಸಮಾನ ಪಾಲಿಲ್ಲ!; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ!

ನವದೆಹಲಿ: ಪಿತ್ರಾರ್ಜಿತವಾಗಿ ಬಂದ ಆಸ್ತಿಗಾಗಿ ಹಲವಾರು ವ್ಯಾಜ್ಯಗಳು ಕೋರ್ಟ್​​ ಮೆಟ್ಟಿಲೇರಿವೆ. ಈ ವಿಚಾರವಾಗಿ ಕುಟುಂಬದಲ್ಲಿ ಬಿರುಕು, ಜಗಳವುಂಟಾಗಿರುವುದನ್ನು ನಾವು ಕೇಳಿದ್ದೇವೆ. ಹೀಗೆ ಇಲ್ಲೊಬ್ಬಳು ಮುಸ್ಲಿಂ ಮಹಿಳೆ ವೈಯಕ್ತಿಕ ಕಾನೂನು ನಿಬಂಧನೆಗಳ ಪ್ರಕಾರ ಆಸ್ತಿಯ ವಿಭಜನೆಯು ಮಹಿಳೆಯರಿಗೆ ತಾರತಮ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ತನ್ನ ಸಹೋದರನಿಗೆ ಸಿಕ್ಕಿರುವ ಅರ್ಧದಷ್ಟು ತನಗೆ ಪೂರ್ವಜರ ಆಸ್ತಿಯಲ್ಲಿ ಪಾಲು ನೀಡಿಲ್ಲ. ಪುರುಷರಿಗೆ ಹೋಲಿಸಿದರೆ ಮುಸ್ಲಿಂ ಮಹಿಳೆಯರಿಗೆ ಪೂರ್ವಜರ ಆಸ್ತಿಯಲ್ಲಿ ಅರ್ಧದಷ್ಟು ಪಾಲು ನೀಡುವುದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಕೇರಳ ಹೈಕೋರ್ಟ್‌ನಿಂದ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಬುಶ್ರಾ ಅಲಿ ಎಂಬ ಮಹಿಳೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಬುಶಾರಾ ಅಲಿ ಎಂಬ ಮುಸ್ಲಿಂ ಮಹಿಳೆ ಭಾರತೀಯ ಸುಪ್ರೀಂ ಕೋರ್ಟ್‌ಗೆ ವಿಶೇಷ ಅರ್ಜಿಯನ್ನು (ಎಸ್‌ಎಲ್‌ಪಿ) ಸಲ್ಲಿಸಿದ್ದಾರೆ. ಪುರುಷ ಮತ್ತು ಸ್ತ್ರೀ ವಾರಸುದಾರರ ನಡುವಿನ ಆಸ್ತಿ ಹಂಚಿಕೆಯಲ್ಲಿ ಮುಸ್ಲಿಂನ ಶರಿಯತ್ ಕಾನೂನು ತಾರತಮ್ಯ ಸ್ವರೂಪವನ್ನು ಎತ್ತಿ ತೋರಿಸುತ್ತದೆ ಎನ್ನಲಾಗಿದೆ.ಮಾರ್ಚ್ 17 ರಂದು, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಸಂಜಯ್ ಕರೋಲ್ ಅವರ ವಿಭಾಗೀಯ ಪೀಠವು ಈ ವಿಷಯದಲ್ಲಿ ನೋಟಿಸ್ ಜಾರಿ ಮಾಡಿದೆ.

ಆಕೆಯ ಸಹೋದರರಿಗೆ ಹೋಲಿಸಿದರೆ ಅಲಿಗೆ ಆಕೆಯ ಪೂರ್ವಜರ ಆಸ್ತಿಯಲ್ಲಿ ಕೇವಲ 1/2 ಷೇರುಗಳನ್ನು ಮಾತ್ರ ನೀಡಲಾಗಿದೆ. ವರದಿಗಳ ಪ್ರಕಾರ, ಆಕೆಯ ಪೂರ್ವಜರ ಆಸ್ತಿಯಲ್ಲಿ ಆಕೆಗೆ 7/152 ಷೇರುಗಳನ್ನು ನೀಡಲಾಗಿದೆ. ಆಕೆಯ ಸಹೋದರರಿಗೆ 14/152 ಷೇರುಗಳನ್ನು ಪಡೆಯುವ ಮೂಲಕವಾಗಿ ಆಕೆಗಿಂತ ಹೆಚ್ಚಿನ ಆಸ್ತಿಯ ಪಾಲನ್ನು ತೆಗೆದುಕೊಂಡಿದ್ದಾನೆ.

ಇಸ್ಲಾಮಿಕ್ ಕಾನೂನಿನಡಿಯಲ್ಲಿ ತನಗೆ ತಾರತಮ್ಯವನ್ನು ಎದುರಿಸಿದ ಬಗ್ಗೆ ಗಾಬರಿಗೊಂಡ ಅವಳು ಪರಿಹಾರ ಸಿಗುವ ಭರವಸೆಯಲ್ಲಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾಳೆ. ಮುಸ್ಲಿಂರ ಷರಿಯತ್ ಕಾನೂನಿನ ಅಡಿಯಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಇದರಿಂದ ಮುಸ್ಲಿಂ ಮಹಿಳೆಯರು ತಾರತಮ್ಯಕ್ಕೆ ಒಳಗಾಗುತ್ತಾರೆ ಎಂದು ಅರ್ಜಿದಾರ ಮಹಿಳೆ ಹೇಳಿದ್ದಾರೆ.

ಅಲಿ ಅವರು ಭಾರತೀಯ ಸಂವಿಧಾನದ 15 ನೇ ವಿಧಿ (ತಾರತಮ್ಯದ ನಿಷೇಧ) ಉಲ್ಲಂಘಿಸಿದ್ದಕ್ಕಾಗಿ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅಪ್ಲಿಕೇಶನ್ ಆಕ್ಟ್, 1937 ರ ಸೆಕ್ಷನ್ 2 ಅನ್ನು ಪ್ರಶ್ನಿಸಿದ್ದಾರೆ.

ಪಿತ್ರಾರ್ಜಿತ ಮತ್ತು ಸ್ವಯಾರ್ಜಿತ ಇವುಗಳ ನಡುವಿನ ವ್ಯತ್ಯಾಸ: ಪೂರ್ವಜರ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ, ಸ್ವಂತ ದುಡಿಮೆಯಿಂದ ಖರೀದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎನ್ನಲಾಗುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೆ ಪಾಲು ಇರುತ್ತದೆ. ಸ್ವಯಾರ್ಜಿತ ಆಸ್ತಿಯಲ್ಲಿ ಮಗ, ಮಗಳು ಅಥವಾ ಕುಟುಂಬದಲ್ಲಿ ಯಾರಿಗೂ ಪಾಲು ಇರುವುದಿಲ್ಲ. ಏಕೆಂದರೆ ತಂದೆ ಬೆಳೆಸಿದ ಅಥವಾ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿಯಾಗಿದೆ.