ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ 13 ವರ್ಷದ ಬಾಲಕಿಯೊಬ್ಬಳು ಹಾರ್ಮೋನಿಯಂ (Harmonium) ನುಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿದ್ದು, ಬಳಕೆದಾರರಿಂದ ಮೆಚ್ಚುಗೆ ಗಳಿಸಿದೆ.
ಆ ರೈಲಿನಲ್ಲಿ ಪ್ರಯಾಣ ನಡೆಸುತ್ತಿದ್ದ ಯುವತಿಯೊಬ್ಬಳು ಸೋನಿಯನ್ನು ಭೇಟಿಯಾಗಿದ್ದಾಳೆ. ಈಕೆ ಪ್ರತಿದಿನ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಭಾನುವಾರ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ದಾದರ್‌ನಿಂದ ರಾಮ ಮಂದಿರಕ್ಕೆ ಪ್ರಯಾಣಿಸುತ್ತಾಳೆ. ಈಕೆ ತುಂಬಾ ಚಿಕ್ಕವಳು ಆದರೆ ತುಂಬಾ ಬಲಶಾಲಿ ಎಂದು ಬಣ್ಣಿಸಿದ್ದು, ಆಕೆಗೆ ಸಾಧ್ಯವಾದಷ್ಟು ಸಹಾಯ ಮಾಡಿ ಎಂದು ಬಲಕೆದಾರರಿಗೆ ಒತ್ತಾಯಿಸಿ ಪೋಸ್ಟ್ ಮಾಡಿದ್ದಾಳೆ.
ಇದನ್ನೂ ಓದಿ: PM Modi | ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಭ್ರಷ್ಟಾಚಾರದ ಯುವ ರಾಜರು: ಮಹಾಘಟಬಂದನ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಸೋನಿ ತನ್ನ ಜೀವನದ ಬಗ್ಗೆ ಮಾತನಾಡುವುದನ್ನು ತೋರಿಸಲಾಗಿದೆ. ಆಕೆ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ಹಾರ್ಮೋನಿಯಂ ನುಡಿಸುತ್ತೇನೆ. ಹಾಗೆಯೇ ಮನೆಯಲ್ಲಿ ಅಡುಗೆ ಮಾಡುತ್ತೇನೆ ಮತ್ತು ರಾತ್ರಿ ಓದುತ್ತೇನೆ ಎಂದು ಹೇಳಿದ್ದಾಳೆ.
ಅವಳ ದಿನಚರಿ ಅವಳ ದೃಢಸಂಕಲ್ಪದ ಪ್ರತಿಬಿಂಬವಾಗಿದೆ. ಸೋನಿ ಬೆಳಿಗ್ಗೆ ಶಾಲೆಗೆ ಹೋಗಿ ನಂತರ ರೈಲಿನಲ್ಲಿ ಪ್ರದರ್ಶನ ನೀಡಲು ಹೊರಡುತ್ತಾಳೆ. ಕೇವಲ 13 ವರ್ಷ ವಯಸ್ಸಿನವಳಾಗಿದ್ದರೂ ಈಕೆ ತನ್ನ ವಯಸ್ಸಿಗೂ ಮೀರಿದ ಜವಬ್ದಾರಿಯನ್ನು ಹೊತ್ತುಕೊಂಡಿರುವ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಚ್ಚರ… ನಿಮ್ಮ ಪ್ರದೇಶದ ಸುತ್ತಮುತ್ತ ಈ ಲಕ್ಷಣಗಳು ಕಂಡುಬಂದರೆ ಅಲ್ಲಿ ಕಾಳಿಂಗ ಸರ್ಪ ಇದೆ ಎಂದರ್ಥ! King Cobra
ಸೋನಿಯವರ ಕಥೆಯನ್ನು ಕೇಳಿದ ಬಳಕೆದಾರರು ಕಮೆಂಟ್ ಮಾಡಿದ್ದು, ಅವಳು ಕೇವಲ ಉಳಿವಿಗಾಗಿ ಹಾಡುವುದಿಲ್ಲ. ಅವಳು ತನ್ನ ಕಥೆಯನ್ನು, ತನ್ನ ಧೈರ್ಯವನ್ನು, ತನ್ನ ಆತ್ಮವನ್ನು ಹಾಡಿನೊಂದಿಗೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಅವಳು ತೃಪ್ತಳಾಗಿದ್ದಾಳೆ. ಅವಳು ನಗುತ್ತಿರುವ ರೀತಿ, ಒಂದೋ ಅವಳಿಗೆ ಒಳಗಿನಿಂದ ತೀವ್ರ ನೋವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಬರೆದಿದ್ದಾರೆ. (ಏಜೆನ್ಸೀಸ್)