ಕೂದಲು ಉದುರುವಿಕೆಗೆ ಹೇಳಿ ಗುಡ್​ ಬೈ! ಏನಿದು ಪೌಷ್ಟಿಕತಜ್ಞರ ಸ್ಮೂಥಿ ರಹಸ್ಯ.. ? Hair Fall

untitled-design-47-6903145ae1005
Published on

Hair Fall: ಇಂದಿನ ದಿನಗಳಲ್ಲಿ ಜನರು ಅನುಭವಿಸುತ್ತಿರುವಂತಹ ಮಾನಸಿಕ ಒತ್ತಡ, ದೈಹಿಕ ಒತ್ತಡ, ಹಾರ್ಮೋನುಗಳ ಅಸಮತೋಲನ, ಪೌಷ್ಟಿಕಾಂಶದ ಕೊರತೆಗಳು ವೈದ್ಯಕೀಯ ಪರೀಕ್ಷೆಗಳು ಸೇರಿದಂತೆ ಹಲವಾರು ಅಂಶಗಳು ಕೂದಲು ಉದುರುವಿಕೆಗೆ ಕಾರಣವಾಗಬಹುದು. ನೀವು ಕೂಡ ಈ ರೀತಿಯ ತೊಂದರೆಗಳನ್ನೇದಾರೂ ಅನುಭವಿಸುತ್ತಿದ್ದರೆ, ಕ್ಲಿನಿಕಲ್​ ಪೌಷ್ಟಿಕತಜ್ಞೆ ಖುಷಿ ಛಬ್ರಾ ಅವರ ಈ ಪರಿಹಾರವನ್ನು ಬಳಸಿ.

ಕೂದಲು ಉದುರುವುದು ಬಹುತೇಕ ಹೊರಗಿನ ಸಮಸ್ಯೆಯಿಂದಲ್ಲ. ಅದು ಒಳಗಿನಿಂದ ಪ್ರಾರಂಭವಾಗುತ್ತದೆ. ಇದು ನಮ್ಮ ದೇಹದಲ್ಲಾಗುವ ದುರ್ಬಲವಾದ ಎಳೆಗಳು, ಅಸ್ವಸ್ಥ ನೆತ್ತಿಯ ಪೋಷಣೆ, ಇವೆಲ್ಲವೂ ಕೂದಲಿನ ಉದುರುವುದನ್ನು ಹೇರಳವಾಗಿಸುತ್ತದೆ. ಪೌಷ್ಟಿಕಾಂಶದ ಗಮನವನ್ನು ಕೇಳುವ ಸಂಕೇತವಾಗಿದೆ. ಪೌಷ್ಟಿಕತಜ್ಞೆ ಖುಷಿ ಛಬ್ರಾ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದ್ದು, ಅವರ ಪ್ರಕಾರ, ಈ ಸ್ಮೂಥಿ "ಪೋಷಕಾಂಶಗಳಿಂದ ತುಂಬಿದೆ" ಮಾತ್ರವಲ್ಲದೆ, ಇದು ಅಷ್ಟೇ ರುಚಿಕರವಾಗಿದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ತಿಳಿಸಿದ್ದಾರೆ.

ಪದಾರ್ಥಗಳು

* 1 ಚಮಚ ಬಾದಾಮಿ ಬೆಣ್ಣೆ

* 2 ಆಲಿವ್ ಬೀಜಗಳು

* 1 ಚಮಚ ಕುಂಬಳಕಾಯಿ ಬೀಜ

* 1 ಚಮಚ ಕಪ್ಪು ಎಳ್ಳು

* 1 ಚಮಚ ಪ್ರೋಟೀನ್ ಪುಡಿ

ಪ್ರಯೋಜನಗಳೇನು?

ಬಾದಾಮಿ ಬೆಣ್ಣೆ

ಬಾದಾಮಿ ಎಣ್ಣೆಯು ವಿಟಮಿನ್​ ಇ ನಿಂದ ಸಮೃದ್ಧವಾಗಿರುತ್ತದೆ. ಇದು ಕೂದಲಿನ ಒಳಗಿನಿಂದ ಪೋಷಿಸಲು ಸಹಾಯ ಮಾಡುತ್ತದೆ. ಇದನ್ನು ಕೂದಲಿಗೆ ಹಚ್ಚುವುದರಿಂದ ನೆತ್ತಿಯನ್ನು ತಂಪು ಮಾಡುವುದರ ಜೊತೆ ಕೂದಲನ್ನು ಒಡೆಯುವುದನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಕೂದಲನ್ನು ಸಮೃದ್ಧವಾಗಿ ಬೆಳೆಸುವಂತೆ ಮಾಡುತ್ತದೆ.

ಆಲಿವ್ ಬೀಜಗಳು

ಆಲಿವ್ ಬೀಜಗಳನ್ನು ನೆತ್ತಿಗೆ ಹಚ್ಚಿ ಸ್ಕ್ರಬ್​ ಮಾಡುವುದರಿಂದ ಇದು ಕೂದಲನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಇದು ಸತ್ತು ಹೋದಂತಹ ಚರ್ಮದ ಸೆಲ್​ಗಳು, ತಲೆಯ ಹೊಟ್ಟನ್ನು ತೆಗೆದುಹಾಕಿ ರಕ್ತ ಸಂಚಾರ ಆಗುವಂತೆ ನೋಡಿಕೊಳ್ಳುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್​ಗಳು ಕೂದಲು ಉದುರುವುದನ್ನು ತಡೆಗಟ್ಟುತ್ತದೆ.

ಕುಂಬಳಕಾಯಿ ಬೀಜಗಳು

ಕುಂಬಳಕಾಯಿ ಬೀಜವು ವಿಟಮಿನ್​ ಎ, ಸಿ, ಇ ಮತ್ತು ಡಿ ಮತ್ತು ಪೊಟ್ಯಾಸಿಯಮ್​ನಂತಹ ಗುಣಗಳನ್ನು ಹೊಂದಿದ್ದು, ಇದು, ಹಾರ್ಮೋನುಗಳ ಸಮತೋಲನವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಇದು ಸತು, ಬಯೋಟಿನ್​​ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದ್ದು, ಕೂದಲು ಉದುರುವುದನ್ನು ಕಡಿಮೆ ಮಾಡಿ. ಕೂದಲಿನ ಸಾಂದ್ರತೆಯನ್ನು ಹೆಚ್ಚಿಸುತ್ತದೆ.

ಕಪ್ಪು ಎಳ್ಳು

ಕಪ್ಪು ಎಳ್ಳಿನಲ್ಲಿ ಕ್ಯಾಲ್ಸಿಯಂ, ಸತು, ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳು ಸಮೃದ್ಧವಾಗಿರುತ್ತವೆ. ಇದು ನೆತ್ತಿಯಲ್ಲಿ ರಕ್ತ ಸಂಚಾರವನ್ನು ಉತ್ತೇಜಿಸಿ ಅಕಾಲಿಕ ಬೂದು ಬಣ್ಣವನ್ನು ತಡೆಯುತ್ತದೆ.

ಪ್ರೋಟೀನ್ ಪೌಡರ್

ಪ್ರೊಟೀನ್​ ಪೌಡರ್​ಗಳನ್ನು ಆಹಾರದಲ್ಲಿ ಬಳಸುವುದರಿಂದ ಇದು ಕೂದಲನ್ನು ದಪ್ಪವಾಗಿ ಹಾಗೂ ಹೇರಳವಾಗಿ ಬೆಳೆಸಲು ಸಹಾಯ ಮಾಡುತ್ತದೆ. ಆದರಿಂದ ದೇಹಕ್ಕೆ ಬೇಕಾದಷ್ಟು ಪ್ರೋಟೀನ್​ ಸೇವಿಸುವುದು ಉತ್ತಮವಾಗಿದೆ.

ಸ್ಮೂಥಿಯ ಪಾಕವಿಧಾನ ಏನು?

ಮೊದಲು ಒಂದು ಬ್ಲೆಂಡರ್‌ಗೆ ಈ ಬೀಜಗಳನ್ನು ಮತ್ತು ನೀರನ್ನು ಸೇರಿಸಿ ರುಬ್ಬಿ ಕೆನೆಭರಿತ" ಬೀಜದ ಹಾಲು ತಯಾರಿಸಿಕೊಳ್ಳಿ. ಈ ಮಿಶ್ರಣಕ್ಕೆ ಸ್ವಲ್ಪ ಪ್ರೊಟೀನ್​ ಪೌಡರ್​ನ್ನು ಸೇರಿಸಿ ಕುಡಿಯಿರಿ. ಇದು ನಿಮ್ಮ ಕೂದಲನ್ನು ಒಡೆಯದೇ, ಹಾಳಾಗದೆ, ಸಮೃದ್ಧವಾಗಿ ಬೆಳೆಯುವಂತೆ ಮಾಡುತ್ತದೆ ಎಂದು ಪೌಷ್ಟಿಕತಜ್ಞರು ಸೂಚಿಸಿದ್ದಾರೆ. ಈ ಸ್ಮೂಥಿಯನ್ನು 15 ದಿನಗಳ ವರೆಗೆ ಸೇವಿಸಿ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net