ಮುಂಬೈ: ಶುಕ್ರವಾರ (ಅ.5) ಗೋರೆಗಾಂವ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಂಟು ಜನರು ಸಾವನ್ನಪ್ಪಿದ್ದು, 61 ಮಂದಿ ಗಾಯಗೊಂಡ ಬೆನ್ನಲ್ಲೇ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಉಚಿತ ಚಿಕಿತ್ಸೆಯನ್ನು ಘೋಷಿಸಿದ್ದಾರೆ.
ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಶಿಂಧೆ, ಸಂತ್ರಸ್ತರನ್ನು ಭೇಟಿ ಮಾಡುವಂತೆ ರಕ್ಷಣಾ ಸಚಿವ ಮಂಗಲ್ ಪ್ರಭಾತ್ ಲೋಧಾ ಮತ್ತು ದೀಪಕ್ ಕೇಸರ್ಕರ್ ಅವರಿಗೆ ಸೂಚಿಸಿದರು. ಘಟನೆ ಕುರಿತು ಟ್ವೀಟ್ ಮಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, "ಮುಂಬೈನ ಗೋರೆಗಾಂವ್ ಅಗ್ನಿ ದುರಂತದಲ್ಲಿ ಜೀವಹಾನಿಯ ಬಗ್ಗೆ ತಿಳಿದು ತುಂಬ ನೋವಾಗಿದೆ. ನಾವು ನಾಗರಿಕ ಅಧಿಕಾರಿಗಳು ಮತ್ತು ಮುಂಬೈ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲಾ ನೆರವು ನೀಡಲಾಗುತ್ತಿದೆ. ಕುಟುಂಬಗಳಿಗೆ ಸಂತಾಪ" ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡ ಸಂತಾಪ ಸೂಚಿಸಿದ್ದು, "ಪಿಎಂಎನ್‌ಆರ್‌ಎಫ್‌ನಿಂದ ಪ್ರತಿ ಮೃತರ ಮುಂದಿನ ಸಂಬಂಧಿಕರಿಗೆ ಎರಡು ಲಕ್ಷ ರೂ. ಪರಿಹಾರ ಹಣವನ್ನು ನೀಡಲಾಗುವುದು" ಎಂದು ತಿಳಿಸಿದ್ದಾರೆ.
ಘಟನೆಯ ವಿವರ: ಗುರುವಾರ (ಅ.5) ಮುಂಜಾನೆ 3:05ಕ್ಕೆ ಗೋರೆಗಾಂವ್ ಪಶ್ಚಿಮದಲ್ಲಿರುವ ಆಜಾದ್ ಮೈದಾನದ ಸಮೀಪದಲ್ಲಿರುವ ಏಳು ಅಂತಸ್ತಿನ SRA 'ಜಯ್ ಭವಾನಿ' ಕಟ್ಟಡದಲ್ಲಿ ಅಗ್ನಿ ಕಾಣಿಸಿಕೊಂಡಿತು. 2ನೇ ಹಂತದ ಬೆಂಕಿಯನ್ನು ಬೆಳಗ್ಗೆ 6:54ಕ್ಕೆ ನಂದಿಸಲಾಯಿತು.
ಬಿಎಂಸಿ ಪ್ರಕಾರ, ಘಟನೆಯಲ್ಲಿ 68 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಕೂಪರ್, ಎಚ್‌ಬಿಟಿ ಆಸ್ಪತ್ರೆ ಜೋಗೇಶ್ವರ್, ಲೈಫ್‌ಲೈನ್, ಮಾತೋಶ್ರೀ ಗೋಮತಿ ಮತ್ತು ಸುವಿಧಾ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುತ್ತಿದೆ,(ಏಜೆನ್ಸೀಸ್).