ಕೊಚ್ಚಿ: ಸಾಮಾನ್ಯವಾಗಿ ಅಪಘಾತವಾದರೆ ಗಂಭೀರ ಗಾಯ ಅಥವಾ ಸಾಯುವುದುಂಟು. ಆದರೆ, ಅಪಘಾತ ಇನ್ನೊಬ್ಬರನ್ನು ಬದುಕಿಸಿದೆ ಎಂಬುದನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಅದು ನಿಜವಾಗಿದೆ. ಕಾರು ಮತ್ತು ಜೆಸಿಬಿ ಯಂತ್ರದ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಪಾರಾಗಿದ್ದಾನೆ.
ಈ ಘಟನೆ ಕೇರಳದ ಹೆದ್ದಾರಿಯಲ್ಲಿ ಶನಿವಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?: ಯುವಕನೊಬ್ಬ ತನ್ನ ಬೈಕ್ ಅನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಅದರ ಮೇಲೆ ಕುಳಿತಿರುತ್ತಾನೆ. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬರುವ ಜೆಸಿಬಿ ನಿಯಂತ್ರಣ ತಪ್ಪಿ ಯುವಕನತ್ತ ಧಾವಿಸಿ ಬರುತ್ತದೆ. ಅದೇ ವೇಳೆಗೆ ಎದುರಿಗೆ ಬರುವ ಬೊಲೆರೋ ಎಸ್ಯುವಿ ಕಾರು ಜೆಸಿಬಿಗೆ ಡಿಕ್ಕಿ ಹೊಡೆಯುತ್ತದೆ. ಇಷ್ಟರಲ್ಲಾಗಲೇ ಯುವಕ ಬೈಕ್ನಿಂದ ಕೆಳಗೆ ಹಾರಿರುತ್ತಾನೆ.
ಅದೃಷ್ಟವಶಾತ್ ಬೈಕ್ ಮೇಲೆ ಕುಳಿತಿದ್ದ ಯುವನಿಗೆ ಏನೂ ಆಗಿಲ್ಲ. ಇನ್ನು ಕಾರಿನಲ್ಲಿದ್ದ ಚಾಲಕನಿಗೂ ಸಹ ಗಾಯಗಳಾಗಿಲ್ಲ. ಆದರೆ, ಜೆಸಿಬಿ ಚಾಲಕನಿಗೆ ಗಾಯವಾಗಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ಡೈಲಿ ಮೇಲ್)