More

    ಲ್ಯಾಂಬೋರ್ಗಿನಿ ಕಾರು ವಶ

    ಬೆಂಗಳೂರು: ನಕಲಿ ನೋಂದಣಿ ಸಂಖ್ಯೆ ಫಲಕ ಬಳಸಿ ಸಂಚರಿಸುತ್ತಿದ್ದ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಯಶವಂತಪುರ ಆರ್​ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಗಣೇಶ್ ಗೌಡ ಎಂಬುವರಿಗೆ ಸೇರಿದ 5.5 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಕಾರಿಗೆ ಎಂಎಚ್ 02 ಬಿಎಂ 9000 ಸಂಖ್ಯೆಯ ಫಲಕ ಅಳವಡಿಸಿ ಬಳಸಲಾಗುತ್ತಿತ್ತು. ಆದರೆ, ಆ ಸಂಖ್ಯೆ ನಕಲಿ ಎಂಬ ಮಾಹಿತಿ ಆರ್​ಟಿಒ ಅಧಿಕಾರಿಗಳಿಗೆ 40 ದಿನಗಳ ಹಿಂದೆಯೇ ದೊರೆತಿತ್ತು. ಅಂದಿನಿಂದ ಕಾರಿನ ಮೇಲೆ ಹಿರಿಯ ಮೋಟಾರು ವಾಹನ ನಿರೀಕ್ಷಕ ಎಚ್. ರಾಜಣ್ಣ ಮತ್ತು ಎಂ.ಎನ್. ಸುಧಾಕರ ನಿಗಾವಹಿಸಿದ್ದರು. ಅಲ್ಲದೆ, ಮಹಾರಾಷ್ಟ್ರ ಸಾರಿಗೆ ಇಲಾಖೆಯನ್ನು ಸಂರ್ಪಸಿ ನೋಂದಣಿ ಸಂಖ್ಯೆ ಕುರಿತು ವಿಚಾರಿಸಿದಾಗ ಆ ಸಂಖ್ಯೆಯಲ್ಲಿ ಲ್ಯಾಂಬೋರ್ಗಿನಿ ಕಾರು ನೋಂದಣಿ ಆಗಿಲ್ಲದಿರುವುದು ತಿಳಿದುಬಂದಿತ್ತು.

    ಸೋಮವಾರ ಬಸವೇಶ್ವರನಗರದ ಗ್ಯಾರೇಜ್​ವೊಂದಕ್ಕೆ ರಿಪೇರಿಗೆ ಬಂದಿದ್ದ ಕಾರನ್ನು ಸಾರಿಗೆ ಅಧಿಕಾರಿಗಳು ವಶಕ್ಕೆ ಪಡೆಯಲನುವಾದಾಗ ಕೂಡಲೇ ವಾಹನ ಮಾಲೀಕರು ಸ್ಥಳಕ್ಕೆ ಧಾವಿಸಿದರು. ಮಂಗಳವಾರ ಕಾರಿನ ಕುರಿತ ಎಲ್ಲ ದಾಖಲೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಆರ್​ಟಿಒ ಅಧಿಕಾರಿಗಳು ಹೇಳಿದ್ದಾರೆ.

    ದೆಹಲಿ ನೋಂದಣಿ: ಕಾರು ವಶಕ್ಕೆ ಪಡೆದ ನಂತರ ಚಾಸ್ಸಿ ಸಂಖ್ಯೆ ಆಧಾರದ ಮೇಲೆ ಕಾರಿನ ಮಾಹಿತಿ ಪರಿಶೀಲಿಸಿದಾಗ ಕಾರು ದೆಹಲಿ ನೋಂದಣಿಯದ್ದೆಂದು ತಿಳಿದು ಬಂದಿದೆ. ಆದರೂ, ಕಾರಿಗೆ ಮಹಾರಾಷ್ಟ್ರದ ನೋಂದಣಿ ಫಲಕ ಹಾಕಿರುವುದೇಕೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    40 ಲಕ್ಷ ರೂ. ತೆರಿಗೆ ಬಾಕಿ?

    ಲ್ಯಾಂಬೋರ್ಗಿನಿ ಕಾರು 2008 ರಲ್ಲಿ ಖರೀದಿ ಮಾಡಿದ್ದಾಗಿದೆ. ಅಂದಿನಿಂದಲೂ ತೆರಿಗೆ ಪಾವತಿಸದೆ ವಂಚಿಸಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಲ್ಲಿ 40 ಲಕ್ಷ ರೂ.ಗೂ ಹೆಚ್ಚು ಬಾಕಿ ಇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಪೊಲೀಸರಿಗೆ ಹೆದರಿ ಓಡಿ, ಜೀವವನ್ನೇ ಕಳೆದುಕೊಂಡ ಯುವಕ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts