ನ್ಯೂಸ್

ಮಗಳ ಮಾವನ ಜತೆ ಓಡಿ ಹೋದ 4 ಮಕ್ಕಳ ತಾಯಿ: ಅಮ್ಮನ ರಾತ್ರಿ ರಹಸ್ಯ ಬಯಲು ಮಾಡಿದ ಪುತ್ರ! Mother of four elopes

Mother of four elopes : ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಅದಕ್ಕೆ ಅನೈತಿಕ ಸಂಬಂಧಗಳು ಕೂಡ ಒಂದು ಕಾರಣ. ಕೆಲವರು ದೈಹಿಕ ಸುಖಕ್ಕಾಗಿ ಸಂಬಂಧಗಳನ್ನೇ ಮರೆತು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ತನ್ನ ಭಾವಿ ಅಳಿಯನ ಜತೆಯಲ್ಲೇ ಓಡಿ ಹೋಗಿ ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಇನ್ನೊಬ್ಬ ಮಹಿಳೆ ತನ್ನ ಹೆತ್ತ ಮಗಳ ಮಾವನೊಂದಿಗೆ ಅಕ್ರಮ ಸಂಬಂಧ ಬೆಳೆಸಿರುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.

ವಿವರಗಳ ಪ್ರಕಾರ, ಉತ್ತರ ಪ್ರದೇಶದ ಬದೌನ್​ ಜಿಲ್ಲೆಯ ದತಗುಂಜ್ ಕೊಟ್ವಾಲಿ ಪ್ರದೇಶದ ಸುನಿಲ್ ಮತ್ತು ಮಮತಾ 2002ರಲ್ಲಿ ವಿವಾಹವಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸುನಿಲ್ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಾ ತನ್ನ ಕುಟುಂಬವನ್ನು ಪೋಷಿಸುತ್ತಿದ್ದಾರೆ. ಹೀಗಿರುವಾಗ ತಮ್ಮ ಹಿರಿಯ ಮಗಳನ್ನು ಬದೌನ್ ಜಿಲ್ಲೆಯ ಸದರ್ ಕೊಟ್ವಾಲಿ ಪ್ರದೇಶದ ಯುವಕನೊಬ್ಬನಿಗೆ ಕೊಟ್ಟು 2022ರಲ್ಲಿ ಮದುವೆ ಮಾಡಿದರು.

ಆದರೆ, ತನ್ನ ಮಗಳು ಮದುವೆಯಾದ ನಂತರ, ಆಕೆಯ ಮಾವನೊಂದಿಗೆ ಮಮತಾ ಅನೈತಿಕ ಸಂಬಂಧ ಬೆಳೆಸಿದಳು. ಇಬ್ಬರ ನಡುವೆ ಸುಮಾರು ಎರಡು ವರ್ಷಗಳ ಕಾಲ ಸಂಬಂಧವಿತ್ತು. ಸುನಿಲ್ ಟ್ರಕ್ ಓಡಿಸುತ್ತಿದ್ದ ಕಾರಣ ತಿಂಗಳಿಗೆ ಕೆಲವು ದಿನಗಳು ಮಾತ್ರ ಮನೆಯಲ್ಲಿರುತ್ತಿದ್ದ. ಸುನಿಲ್ ಇಲ್ಲದಿದ್ದಾಗ, ಶೈಲೇಂದ್ರ, ಮಮತಾಳ ಮನೆಗೆ ಬರುತ್ತಿದ್ದ. ಇಬ್ಬರೂ ಬೀಗರಾದ್ದರಿಂದ ಯಾರಿಗೂ ಏನೂ ಅನುಮಾನ ಬರುತ್ತಿರಲಿಲ್ಲ. ಹೀಗಿರುವಾಗ ಇತ್ತೀಚೆಗಷ್ಟೇ ಮಮತಾ ಮತ್ತು ಶೈಲೇಂದ್ರ ಮನೆಯಿಂದ ಓಡಿಹೋದರು. ಆಗಲೇ ಅವರಿಬ್ಬರು ಮಧ್ಯೆ ಅನೈತಿಕ ಸಂಬಂಧ ಇರುವ ವಿಚಾರ ಎಲ್ಲರಿಗೂ ಗೊತ್ತಾಯಿತು.

ಸದ್ಯ ಸಂತ್ರಸ್ತ ಪತಿ ಸುನಿಲ್, ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸುನೀಲ್​, ನಾನು ಬೇರೆ ಗ್ರಾಮದಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತೇನೆ. ಆದರೆ, ನನ್ನ ಹೆಂಡತಿಗೆ ಸಮಯಕ್ಕೆ ಸರಿಯಾಗಿ ಹಣ ಕಳುಹಿಸುತ್ತೇನೆ. ಕುಟುಂಬದ ಖರ್ಚಿಗೆ ಆಗಾಗ ಹಣ ನೀಡುತ್ತಲೇ ಇದ್ದೆ. ನಾನು ಮನೆಯಲ್ಲಿ ಇಲ್ಲದಿದ್ದಾಗ ನನ್ನ ಹೆಂಡತಿ, ಶೈಲೇಂದ್ರ ಜೊತೆ ಕರೆ ಮಾಡಿ ಮಾತನಾಡಿದ್ದಳು. ಮನೆಗೆ ಬರಲು ಹೇಳುತ್ತಿದ್ದಳು. ಈಗ ಅವರಿಬ್ಬರು ಓಡಿಹೋಗಿದ್ದಾರೆ. ಮನೆಯಲ್ಲಿದ್ದ ಎಲ್ಲ ಆಭರಣ ಮತ್ತು ಹಣವನ್ನು ತೆಗೆದುಕೊಂಡು ಓಡಿಹೋಗಿದ್ದಾರೆ ಎಂದು ತಮ್ಮ ದುಃಖವನ್ನು ತೋಡಿಕೊಂಡರು.

ನಮ್ಮ ತಂದೆ ಮನೆಯಲ್ಲಿ ಇಲ್ಲದಿದ್ದಾಗ ಶೈಲೇಂದ್ರ ನಮ್ಮ ಮನೆಗೆ ಬರುತ್ತಿದ್ದರು. ಅಲ್ಲದೆ, ನನ್ನ ತಾಯಿ ಮೂರು ದಿನಗಳಿಗೊಮ್ಮೆ ಅವರಿಗೆ ಕರೆ ಮಾಡುತ್ತಿದ್ದರು. ಶೈಲೇಂದ್ರ ಮನೆಗೆ ಬಂದಾಗಲೆಲ್ಲ ನಮ್ಮನ್ನು ಬೇರೆ ಕೋಣೆಗೆ ಕಳುಹಿಸುತ್ತಿದ್ದರು. ಇದೀಗ ಇಬ್ಬರು ಓಡಿಹೋಗಿದ್ದಾರೆ ಎಂದು ಸುನೀಲ್​ ಅವರ ಪುತ್ರ ಸಚಿನ್​ ಹೇಳಿದರು.

ಈ ಬಗ್ಗೆ ಸ್ಥಳೀಯರು ಕೂಡ ಮಾತನಾಡಿದ್ದು, ಸುನಿಲ್ ಬೇರೆಡೆ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಅವರು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಮಾತ್ರ ಮನೆಗೆ ಬರುತ್ತಿದ್ದ. ಪತಿ ಮನೆಯಿಂದ ಹೊರಗೆ ಹೋಗಿದ್ದರಿಂದ, ಮಮತಾ ಶೈಲೇಂದ್ರ ಅವರನ್ನು ಆಹ್ವಾನಿಸುತ್ತಿದ್ದರು. ಅವರು ಮಧ್ಯರಾತ್ರಿ 12 ಗಂಟೆಗೆ ಮನೆಗೆ ಬಂದು ಬೆಳಗಿನ ಜಾವ ಹೊರಡುತ್ತಿದ್ದರು ಎಂದು ಹೇಳಿದ್ದಾರೆ.

ಸುನಿಲ್ ಕುಮಾರ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶೈಲೇಂದ್ರ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ದೂರಿನ ಸ್ವೀಕೃತಿಯನ್ನು ದೃಢಪಡಿಸಿದ ದಾತಗಂಜ್ ವೃತ್ತ ಅಧಿಕಾರಿ ಕೆ.ಕೆ. ತಿವಾರಿ, ಮಹಿಳೆಯೊಬ್ಬರು ತನ್ನ ಮಗಳ ಮಾವನ ಜೊತೆ ಓಡಿ ಹೋಗಿದ್ದಾರೆ ಎಂದು ಹೇಳುವ ದೂರು ಬಂದಿದೆ. ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)