ನ್ಯೂಸ್

ಸೋಂಕು ತಗ್ಗಿದರೂ ಕಡಿಮೆಯಾಗಲಿಲ್ಲ ಸಾವು! ಒಂದೇ ದಿನ 4,500ಕ್ಕೂ ಅಧಿಕ ಮಂದಿಯನ್ನು ಬಲಿಪಡೆದ ಕರೊನಾ!

ನವದೆಹಲಿ: ದೇಶದಲ್ಲಿ ಕರೊನಾ ಅಬ್ಬರವನ್ನು ಮುಂದುವರಿಸಿದೆ. ಪ್ರತಿನಿತ್ಯ ಪತ್ತೆಯಾಗುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆಯಾದರೂ ಸೋಂಕಿನಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಮಂಗಳವಾರ ದಾಖಲೆಯ ಪ್ರಮಾಣದಲ್ಲಿ ಸೋಂಕಿತರು ಸಾವನ್ನಪ್ಪಿದ್ದಾರೆ.


ಒಂದೇ ದಿನದಲ್ಲಿ 4,529 ಸೋಂಕಿತರು ಬಲಿಯಾಗಿದ್ದಾರೆ. ಇದು ಈವರೆಗಿನ ಏಕದಿನ ಸಾವಿನ ಸಂಖ್ಯೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಾಗಿದೆ. 24 ಗಂಟೆಗಳಲ್ಲಿ 2,67,334 ಮಂದಿಗೆ ಸೋಂಕು ದೃಢವಾಗಿದೆ. 3,89,851 ಸೋಂಕಿತರು ಗುಣಮುಖರಾಗಿದ್ದಾರೆ.

ದೇಶದಲ್ಲಿ ಈವರೆಗೆ ಪತ್ತೆಯಾದ ಒಟ್ಟಾರೆ ಸೋಂಕಿತರ ಸಂಖ್ಯೆ 2,54,96,330ಕ್ಕೆ ಏರಿಕೆಯಾಗಿದೆ. ಅದರಲ್ಲಿ 2,19,86,363 ಸೋಂಕಿತರು ಗುಣಮುಖರಾಗಿದ್ದು, 32,26,719 ಸಕ್ರಿಯ ಪ್ರಕರಣಗಳು ಬಾಕಿಯಿವೆ. ಈವರೆಗೆ ಸುಮಾರು 2,83,248 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)