ಬೆಂಗಳೂರು: ಮನೆಯಲ್ಲಿ ಕೆಲಸ ಸಲೀಸಾಗಬೇಕೆಂದರೆ ಅದಕ್ಕೆ ತಕ್ಕನಂತೆ ಮೆಷಿನ್ ಇರಬೇಕು. ಸಾರಿನ ಮಸಾಲೆ ರೆಡಿ ಮಾಡುವುದಕ್ಕೆ ಮಿಕ್ಸಿ, ಬಟ್ಟೆ ತೊಳೆಯೋದಕ್ಕೆ ವಾಷಿಂಗ್ ಮಷಿನ್ ಹೀಗೆ ಒಂದೊಂದು ಕೆಲಸಕ್ಕೆ ಒಂದೊಂದು ಮೆಷಿನ್. ಆದರೆ ಈ ಮಂಗ ಸಾಕಿಕೊಂಡರೆ ಬಹುಶಃ ಮೆಷಿನ್ ಅವಶ್ಯಕತೆ ಬರದೇ ಇರಬಹುದು.
ಪುಟಾಣಿ ಮಂಗವೊಂದು ನೀರಿನಲ್ಲಿ ಕುಳಿತುಕೊಂಡು ಕರವಸ್ತ್ರವೊಂದನ್ನು ತೊಳೆಯುತ್ತಿದೆ. ಸೋಪು ಹಚ್ಚಿ, ಬ್ರಶ್ನಲ್ಲಿ ತಿಕ್ಕಿ ನೀಟಾಗಿ ತೊಳೆಯುವ ಪ್ರಯತ್ನದಲ್ಲಿ ಮಂಗವಿದೆ. ಈ ರೀತಿಯ ಒಂದು ಮಂಗವನ್ನ ಮನೆಯಲ್ಲಿ ಸಾಕಿಕೊಂಡರೆ ನಿಮ್ಮ ಬಟ್ಟೆಯನ್ನೆಲ್ಲ ಅದೇ ತೊಳೆದುಕೊಡಬಹುದು ಅಲ್ಲವೇ?
ಮಂಗಣ್ಣ ಬಟ್ಟೆ ತೊಳೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಅಬ್ಬಬ್ಬಾ.. ಈ ಕಪಿರಾಯ ಅದೆಷ್ಟು ಚಂದ ಬಟ್ಟೆ ತೊಳೀತಿದಾನೆ ಎನ್ನುತ್ತ ಜನರು ವಿಡಿಯೋವನ್ನು ಶೇರ್ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)