ಕಾನ್ಪುರ್, ಉತ್ತರಪ್ರದೇಶ: ಬಿಸಿಲಿನ ಬೇಗೆ ಆವರಿಸಿದ್ದ ದಿನವೇ ಮಂಗವೊಂದು ಕಾನ್ಪುರ ಪೊಲೀಸ್ ಠಾಣೆ ಬಳಿ ನಿಂತಿದ್ದ ಬೈಕ್ನಿಂದ ಮದ್ಯದ ಬಾಟಲಿಯನ್ನು ಹೊತ್ತೊಯ್ದ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಗಾಂಧಿ ಜಯಂತಿ ದಿನದಂದೇ ಕಾನ್ಪುರದ ಪೊಲೀಸ್ ಠಾಣೆ ಎದುರಿಗೆ ನಿಲ್ಲಿಸಿದ್ದ ಹಲವು ಬೈಕ್ಗಳ ಪೈಕಿ ಒಂದು ಬೈಕ್ನ ಬ್ಯಾಗ್ನೊಳಗೆ ಇಟ್ಟಿದ್ದ ಮದ್ಯದ ಬಾಟಲಿಯನ್ನು ತೆಗೆದುಕೊಂಡ ಕೋತಿಯೊಂದು, ಅದರ ಮುಚ್ಚಳವನ್ನು ತೆಗೆಯಲು ಹರಸಾಹಸ ಪಟ್ಟಿದೆ.
ರಾಯಲ್ ಚಾಲೆಂಜ್ ಮತ್ತು ರಾಯಲ್ ಸ್ಟಾಗ್ ಸೇರಿದಂತೆ ಎರಡು ಮದ್ಯದ ಬಾಟಲಿಗಳು ಬ್ಯಾಗ್‌ನಲ್ಲಿ ಇರಿಸಲಾಗಿತ್ತು. ಈ ಪ್ರದೇಶದಲ್ಲಿ ಮುಂಚಿನಿಂದಲೂ ಕೋತಿಗಳ ಹಾವಳಿ ಹೆಚ್ಚಾಗಿಯೇ ಇದ್ದು, ಅದೇ ರೀತಿ ಈ ಬಾರಿ ಕೂಡ ಸ್ಥಳಕ್ಕೆ ಬಂದ ಕೋತಿ, ಒಂದು ಬಾಟಲಿಯ ಕ್ಯಾಪ್ ತೆಗೆಯುವಲ್ಲಿ ಯಶಸ್ವಿಯಾಗಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಘಟನೆ ಬಗ್ಗೆ ಮಾತನಾಡಿದ ಕಾನ್ಪುರದ ಜಂಟಿ ಕಮಿಷನರ್ ಆನಂದ್ ಪ್ರಕಾಶ್ ತಿವಾರಿ, ವೀಡಿಯೊದ ಬಗ್ಗೆ ನಮಗೆ ತಿಳಿದಿಲ್ಲ. ಮದ್ಯದ ಬಾಟಲಿಗಳು ಯಾರ ಬೈಕ್‌ನಲ್ಲಿವೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದು ಹೇಳಿದರು,(ಏಜೆನ್ಸೀಸ್).