ನ್ಯೂಸ್

ಪೊಲೀಸರಿಗೆ ಶಾಸಕನ ಪುತ್ರ ಆವಾಜ್; ₹ 20,000 ದಂಡ ಹಾಕಿದ ಅಧಿಕಾರಿಗಳು!

ದೆಹಲಿ: ದೆಹಲಿಯ ಓಖ್ಲಾ ಪ್ರದೇಶದಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆ ಭದ್ರತಾ ಗಸ್ತು ನಡೆಸುತ್ತಿದ್ದಾಗ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದ ಇಬ್ಬರ ಮೇಲೆ ಮೋಟಾರು ವಾಹನ ಕಾಯ್ದೆ ಉಲ್ಲಂಘನೆಗಾಗಿ ಒಟ್ಟು 20,000 ರೂ.ಗಳ ದಂಡವನ್ನು ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೈಸನ್ಸ್​ ಇಲ್ಲದೆ ಇಬ್ಬರು ಯುವಕರು ದ್ವಿಚಕ್ರ ವಾಹನ (ಬೈಕ್​) ಓಡಿಸುತ್ತಿದ್ದವರನ್ನು ಪೊಲೀಸರು ತಡೆದು ನಿಲ್ಲಿಸಿದಾಗ ಒಬ್ಬ ಯುವಕ ಇಲ್ಲಿನ ಎಎಪಿ ಶಾಸಕ ಅಮಾನತುಲ್ಲಾ ಖಾನ್​ ಅವರ ಪುತ್ರ ಎಂದು ಹೇಳಿಕೊಂಡು ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಅಲ್ಲದೆ, ಪೊಲೀಸರು ಅಧಿಕಾರಿಗಳು ಡ್ರೈವಿಂಗ್​ ಲೈಸನ್ಸ್​ ಮತ್ತು ಐಡಿಯನ್ನು ಕೇಳಿದಾಗ, ಅವರು, ಅದರ ಅಗತ್ಯ ಇಲ್ಲ ಎಂದು ಹೇಳಿದ್ದಾನೆ. ಎಎಪಿ ಶಾಸಕ ಅಮಾನತುಲ್ಲಾ ಖಾನ್​ ಅವರ ಪುತ್ರ ಎಂದು ಹೇಳಿ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ತಮ್ಮ ವಿಳಾಸ ಹೇಳದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೀಗ ಅತನ ಬೈಕ್​ ವಶಪಡಿಸಿಕೊಂಡು ಕಾನೂನಡಿ 20 ಸಾವಿರ ದಂಡ ಹಾಕಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)