ತರಗತಿಯಲ್ಲಿ ಪ್ರಯೋಗಕ್ಕೆ ಹಸುವಿನ ಶ್ವಾಸಕೋಶ ತಂದ ಬಿಲ್​ಗೇಟ್ಸ್​: ಶಿಕ್ಷಕರು, ವಿದ್ಯಾರ್ಥಿಗಳು ಶಾಕ್​!ಮುಂದೇನಾಯ್ತು ಗೊತ್ತೆ? | Bill Gates

dk (8) (1)
Published on

ಉದ್ಯಮಿ, ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ಗೇಟ್ಸ್(Bill Gates) ಅವರ ಆತ್ಮಚರಿತೆ ಮುಂದಿನ ಫೆಬ್ರವರಿಯಲ್ಲಿ ಬಿಡುಗಡೆಗೊಳ್ಳಲಿದ್ದು. ಅದರಲ್ಲಿನ ಕೆಲ ಮಾಹಿತಿಗಳನ್ನು ಬಿಲ್​​ಗೇಟ್ಸ್​ ಹೊರ ಹಾಕಿದ್ದಾರೆ. ಅದರಲ್ಲಿ ಸ್ವಾರಸ್ಯಕರ ಘಟನೆಯೊಂದು ಎಲ್ಲರನ್ನೂ ಹೇಗೆ ಆಶ್ಚರ್ಯಗೊಳಿಸಿತು ಎಂಬುವುದರ ಬಗ್ಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಖಾಸಯಿಖಾನೆಯಿಂದ ಶ್ವಾಸಕೋಶ ತಂದೆ

ಘಟನೆ ಬಗ್ಗೆ ವಿವರಿಸಸಿರುವ ಅವರು, ನಾನು 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಪ್ರಯೋಗ ಇತ್ತು. ಹೀಗಾಗಿ, ನಾನು ಹಸುವಿನ ಶ್ವಾಸಕೋಶವನ್ನು ನೇರವಾಗಿ ಶಾಲೆಯೊಳಗೆ ಹೊಯ್ದು ಎಲ್ಲರ ಎದರು ಟೇಬಲ್​​ ಮೇಲಿಟ್ಟು ಪ್ರದರ್ಶಿಸಿದೆ. ಅಲ್ಲದೆ, ಅದರ ಬಗ್ಗೆ ವಿವರ ನೀಡುವಂತೆ ಶಿಕ್ಷಕರಿಗೆ ಸೂಚಿಸಿದೆ. ಆದರೆ, ಶ್ವಾಸಕೋಶವನ್ನು ನೋಡಿ ತಕ್ಷಣ ಗಾಬರಿಯಾದ ಶಿಕ್ಷರು ಮತ್ತು ವಿದ್ಯಾರ್ಥಿಗಳು ಶಾಕ್​ಗೆ ಒಳಗಾಗಿದ್ದರು ಎಂದು ಬಿಲ್​ಗೇಟ್ಸ್​ ಹೇಳಿಕೊಂಡಿದ್ದಾರೆ.

ಮುಂದುವರೆದು, ಶಿಕ್ಷಕರು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ತಂದೆಯ ಸಹಾಯದಿಂದ ಖಾಸಯಿಖಾನೆಯಿಂದ ಶ್ವಾಸಕೋಶವನ್ನು ಪೇಪರ್​ನಲ್ಲಿ ಸುತ್ತಿಕೊಂಡು ತಂದಿದ್ದೇನೆ ಎಂದೆ. ಕೊನೆಗೂ ಶ್ವಾಸಕೋಶವನ್ನು ಹುಬ್ಬಿಸಿ ಅದರ ಬಗ್ಗೆ ಹೇಳೋಕೆ ಆರಂಭಿಸಿದೆ. ಆದರೆ, ಅಲ್ಲೊಬ್ಬ ನನ್ನ ಸಹಪಾಟಿ ಮೂರ್ಚೆ ಹೊದ, ಎಲ್ಲರೂ ವಾಸನೆ ಬಗ್ಗೆ ಪ್ರಶ್ನೆ ಎತ್ತಿದರು. ಶಿಕ್ಷರು ಮಾತ್ರ ನನ್ನ ಪ್ರಯೋಗಕ್ಕೆ ಪ್ರಭಾವಿತರಾದರು. ಈ ಪ್ರಯೋಗ ಅದ್ಭುತವಾಗಿದೆ. ಆದ್ರೆ, ಇದನ್ನು ಕ್ಲಾಸ್​ನಿಂದ ಹೊರಗಿಡಿ ಎಂದು ಶಿಕ್ಷಕರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು ಎಂದು ಹೇಳಿದ್ದಾರೆ. ಈ ಘಟನೆಯನ್ನು ಮರುಸೃಷ್ಠಿಸಿದ ಬಿಲ್​ಗೇಟ್ಸ್​ ನಾನು ಸಾಮಾನ್ಯವಾಗಿ ಕೈಗವಸು ಧರಿಸುವುದಿಲ್ಲ ಎಂದು ಹೇಳುತ್ತಾ ವಿಡಿಯೋವೊಂದನ್ನು ಇತ್ತೀಚಿಗೆ ಇನ್ಸ್​ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net