ಈಗಾಗಲೇ ಬಹುಭಾಷಾ ಸಿನಿಮಾ ಪರಿಕಲ್ಪನೆ ವರ್ಕೌಟ್ ಆಗುತ್ತಿದೆ. ಕನ್ನಡದ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಾಣುತ್ತಿವೆ. ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಕನ್ನಡಕ್ಕೆ ಆಗಮಿಸುತ್ತಿವೆ. ಇದೀಗ ಮಲಯಾಳಂನ ಮತ್ತೊಂದು ಸಿನಿಮಾ ಕನ್ನಡದ ಜತೆಗೆ ಒಟ್ಟು ಐದು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. ಇತ್ತೀಚೆಗಷ್ಟೇ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ.
ಇದನ್ನೂ ಓದಿ: ಇಂದಿನಿಂದ ‘ಕೆಜಿಎಫ್ ಚಾಪ್ಟರ್ 2’ ಶೂಟಿಂಗ್ ಶುರು
ಮಲಯಾಳಂನಲ್ಲಿ ‘ಮಿನ್ನಾಲ್ ಮುರಳಿ’ ಶೀರ್ಷಿಕೆಯಲ್ಲಿ ಸಿದ್ಧವಾಗಲಿರುವ ಈ ಚಿತ್ರದಲ್ಲಿ ತೋವಿನ್ ಥಾಮಸ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಸೂಪರ್ ಹೀರೋ ಕಾನ್ಸೆಪ್ಟ್ನ ಈ ಚಿತ್ರವನ್ನು ಬಸಿಲ್ ಜೋಸೆಫ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ 5 ಭಾಷೆಗಳ ಪೋಸ್ಟರ್ ಬಿಡುಗಡೆ ಮಾಡಿಕೊಂಡಿದೆ.
ಮಲಯಾಳಂ ಮತ್ತು ತಮಿಳಿನಲ್ಲಿ ‘ಮಿನ್ನಾಲ್ ಮುರಳಿ’, ಕನ್ನಡಲ್ಲಿ ಮಿಂಚು ಮುರಳಿ, ತೆಲುಗಿನಲ್ಲಿ ಮೆರುಪು ಮುರಳಿ ಮತ್ತು ಹಿಂದಿಯಲ್ಲಿ ಮಿಸ್ಟರ್ ಮುರಳಿಯಾಗಿ ಸಿನಿಮಾ ತಯಾರಾಗಲಿದೆ. ಸದ್ಯಕ್ಕೆ ಪೋಸ್ಟರ್ ಬಿಡುಗಡೆ ಮಾಡಿಕೊಂಡಿರುವ ತಂಡ ಆಗಸ್ಟ್ 31ಕ್ಕೆ ಟೀಸರ್ ಬಿಡುಗಡೆ ಮಾಡಿಕೊಳ್ಳಲಿದೆ.
ಕನ್ನಡದಲ್ಲಿ ಚಿತ್ರದ ಈ ಪೋಸ್ಟರ್ ಅನ್ನು ಪ್ರಿಯಾಂಕಾ ಉಪೇಂದ್ರ, ಕಾರ್ತಿಕ್ ಜಯರಾಮ್ ಸೇರಿ ಹಲವರು ಹಂಚಿಕೊಂಡು ತಂಡಕ್ಕೆ ಶುಭಕೋರಿದ್ದಾರೆ.