ನ್ಯೂಸ್

ಭಾರತೀಯ ಗಾಯಕ ಮಿಕಾ ಸಿಂಗ್​​ಗೆ ಪಾಕಿಸ್ತಾನಿ ಅಭಿಮಾನಿಯ ದುಬಾರಿ ಗಿಫ್ಟ್​​​; ಗೋಲ್ಡ್​ ಚೈನ್​​.. ಡೈಮೆಂಡ್​ ರಿಂಗ್​​, ರೋಲೆಕ್ಸ್​​ ವಾಚ್​​​​.. | Mika Singh

ಅಮೆರಿಕ: ಭಾರತೀಯ ಗಾಯಕ ಮಿಕಾ ಸಿಂಗ್(Mika Singh) ಇತ್ತೀಚೆಗೆ ಅಮೆರಿಕದ ಬಿಲೋಕ್ಸಿಯಲ್ಲಿ ಸಂಗೀತ ಕಾರ್ಯಕ್ರಮದ ಪ್ರದರ್ಶನ ನೀಡಿದರು. ಮಿಕಾ ಸಿಂಗ್ ಅವರ ಹಾಡಿಗೆ ಮನಸೋತ ಪಾಕಿಸ್ತಾನಿ ಅಭಿಮಾನಿಯೊಬ್ಬರು ಗಾಯಕನಿಗೆ ಕೋಟಿ ಮೌಲ್ಯದ ಉಡುಗೊರೆಯನ್ನು ನೀಡಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದ ವೇದಿಕೆಗೆ ಅಭಿಮಾನಿ ಸ್ವತಃ ತೆರಳಿ ಮಿಕಾ ಸಿಂಗ್‌ಗೆ ಉಡುಗೊರೆಗಳನ್ನು ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್ ವಿಡಿಯೋದಲ್ಲಿ, ಮಿಕಾ ಸಿಂಗ್ ಲೈವ್​​ ಕನ್ಸರ್ಟ್​​ ನೀಡುತ್ತಿರುವುದನ್ನು ನೋಡಬಹುದು. ಅಷ್ಟರಲ್ಲಿ ಎರಡು-ಮೂರು ಜನರ ಗುಂಪು ವೇದಿಕೆಯ ಮೇಲೆ ಬಂದು ಮಿಕಾಗೆ ವೈಟ್​ ಗೋಲ್ಡ್​​​ ಚೈನ್​​ ಸರವನ್ನು ಧರಿಸುತ್ತಾರೆ. ಇದಾದ ನಂತರ ಪಾಕಿಸ್ತಾನಿ ಅಭಿಮಾನಿ ಗಾಯಕನಿಗೆ ವಜ್ರದ ಉಂಗುರ ಮತ್ತು ರೋಲೆಕ್ಸ್ ಹ್ಯಾಂಡ್​ ವಾಚ್​​​ ನೀಡುತ್ತಾನೆ. ಅದರ ನಂತರ ಮಿಕಾ ಸಿಂಗ್ ತಮ್ಮ ಅಭಿಮಾನಿಯನ್ನು ತಬ್ಬಿಕೊಳ್ಳುವುದನ್ನು ನೋಡಬಹುದು.

ವರದಿಯ ಪ್ರಕಾರ ಮಿಕಾ ಸಿಂಗ್​​ಗೆ ನೀಡಿರುವ ಉಡುಗೊರೆಗಳ ಬೆಲೆ 3 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಮಿಕಾ ಸಿಂಗ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಂತಹ ಸುಂದರವಾದ ಉಡುಗೊರೆಗಾಗಿ ನನ್ನ ಸಹೋದರ ಅಲಿ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ಮಿಕಾ ಸಿಂಗ್​​​ ಅವರು ಆಜ್ ಕಿ ಪಾರ್ಟಿ', 'ಆಂಖಿ ಸೆ ಗೋಲಿ ಮಾರೆ', 'ಚಿಂತಾ ತಾತಾ ಚಿತಾ ಚಿತಾ', 'ರಾಣಿ ತೂ ಮೈನ್ ರಾಜಾ' ಮತ್ತು 'ಸುಬಹ್ ಹೋನಾ ನಾ ದೇ' ಮುಂತಾದ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ 'ಪುಷ್ಪ 2' ಶೀರ್ಷಿಕೆ ಟ್ರ್ಯಾಕ್‌ಗೆ ಮಿಕಾ ಸಿಂಗ್ ಸಹ ಧ್ವನಿ ನೀಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​​)