ನವದೆಹಲಿ: ದೇಶದಲ್ಲಿ ಕಳೆದ ತಿಂಗಳು ಜಾರಿಯಾಗಿರುವ ಅನ್ಲಾಕ್-05ನ್ನು ನವೆಂಬರ್ 30ರವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕರೊನಾ ವೈರಸ್ ಲಾಕ್ಡೌನ್ ನಂತರ ಒಂದೊಂದೇ ಹಂತವಾಗಿ ಅನ್ಲಾಕ್ ಮಾಡುತ್ತಿರುವ ಕೇಂದ್ರ ಸರ್ಕಾರ, ಆಯಾ ರಾಜ್ಯಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದೂ ಹೇಳಿದೆ. ಸೆ.30ರಂದು ಅನ್ಲಾಕ್ 5ನೇ ಹಂತ ಜಾರಿಗೊಳಿಸಿ ಕೇಂದ್ರ ಗೃಹ ಇಲಾಖೆ ಜಾರಿಗೊಳಿಸಿ, ಸಂಬಂಧಪಟ್ಟ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಅಕ್ಟೋಬರ್ 15ರಿಂದ ದೇಶಾದ್ಯಂತ ಸಿನಿಮಾ ಥಿಯೇಟರ್, ಕ್ರೀಡಾಪಟುಗಳ ತರಬೇತಿಗೆ ಸ್ವಿಮ್ಮಿಂಗ್ ಪೂಲ್ಗಳನ್ನು ತೆರೆಯಲು ಅನುಮತಿ ನೀಡಿತ್ತು. ಅನ್ಲಾಕ್-05ರ ಈ ಎಲ್ಲ ಮಾರ್ಗಸೂಚಿಗಳು ಅಕ್ಟೋಬರ್ 31ರವರೆಗೆ ಅನ್ವಯ ಆಗುವಂತೆ ರೂಪಿಸಲಾಗಿತ್ತು. ಆದರೆ ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯ, ಅನ್ಲಾಕ್-05 ನವೆಂಬರ್ 30ರವರೆಗೂ ಮುಂದುವರಿಯಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಭಟ್ಕಳ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಕೇಂದ್ರ ಸರ್ಕಾರ
ಹಾಗೇ ಕಂಟೇನ್ಮೆಂಟ್ ಝೋನ್ಗಳಲ್ಲಿ ಯಾವುದೇ ಅನ್ಲಾಕ್ ಇಲ್ಲ ಎಂಬುದನ್ನೂ ಹೇಳಿದೆ. ಉಳಿದಂತೆ ಎಲ್ಲ ಕಡೆಗಳಲ್ಲಿ ಆರ್ಥಿಕ ಚಟುವಟಿಕೆಗಳು ಮುಂದುವರಿಯಲಿವೆ. ಮೆಟ್ರೋ, ರೈಲ್ವೆ ನಿಲ್ದಾಣ, ಹೋಟೆಲ್, ಧಾರ್ಮಿಕ ಸ್ಥಳಗಳಲ್ಲಿ ಜನರು ಗುಂಪುಗೂಡಬಹುದು. ಆದರೆ ಸಾಮಾಜಿಕ ಅಂತರ ನಿಯಮ, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಗೃಹ ಇಲಾಖೆ ಇನ್ನೊಮ್ಮೆ ಎಚ್ಚರಿಕೆ ನೀಡಿದೆ.
ಸೆಪ್ಟೆಂಬರ್ 30ರ ಮಾರ್ಗಸೂಚಿಯನ್ನೇ ಮುಂದುವರಿಸಲಾಗುವುದು. ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟ ನಿರ್ಧಾರ ಎಂದು ತಿಳಿಸಿದೆ. ಇದನ್ನೂ ಓದಿ: ಭಟ್ಕಳ ಸಹೋದರರು ಸೇರಿ 18 ಮಂದಿಯನ್ನು ಉಗ್ರರೆಂದು ಘೋಷಿಸಿದ ಕೇಂದ್ರ ಸರ್ಕಾರ
ಈ ಮಧ್ಯೆ ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ. ಕಳೆದ 24ಗಂಟೆಯಲ್ಲಿ 488ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 27,860 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲಿಗೆ ಸಕ್ರಿಯ ಪ್ರಕರಣಗಳು ಕೇವಲ 6,25,857 ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. (ಏಜೆನ್ಸೀಸ್)