ನ್ಯೂಸ್

ಇಡೀ ದೇಶವೇ ನನ್ನ ಮನೆ: ರಾಹುಲ್ ಗಾಂಧಿ ಹೀಗಂದಿದ್ಯಾಕೆ?

ನವದೆಹಲಿ: ಮೇರಾ ಘರ್​ ಪೂರಾ ಹಿಂದೂಸ್ತಾನ್ (ನನ್ನ ಮನೆ ಇಡೀ ಭಾರತ) ಎಂದು ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಇಂದು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ಬಂಗಲೆ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಗಾಂಧಿ ಈ ಮಾತನ್ನು ಹೇಳಿದರು.

ಅಸ್ಸಾಂ ಕಾಂಗ್ರೆಸ್​ ನಾಯಕರ ಜತೆ ಮಾತುಕತೆ ನಡೆಸಲು ಇಂದು ದೆಹಲಿಯ ಎಐಸಿಸಿ ಹೆಡ್​ ಕ್ವಾರ್ಟರ್ಸ್​ಗೆ ಬಂದ ರಾಹುಲ್ ಗಾಂಧಿ ಅಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತ ಒಂದಷ್ಟು ಅನಿಸಿಕೆಗಳನ್ನು ಹಂಚಿಕೊಂಡರು.

'ಮೋದಿ ಉಪನಾಮ' ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ವಯನಾಡ್​ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದ ರಾಹುಲ್ ಗಾಂಧಿ, ಲೋಕಸಭೆ ಸಚಿವಾಲಯ ಹೊರಡಿಸಿದ ಹೊಸ ಆದೇಶದ ಪ್ರಕಾರ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ.

ಆದರೆ ಈ ಹಿಂದೆ ಅನರ್ಹಗೊಂಡಿದ್ದಾಗ 12 ತುಘಲಕ್​ ಲೇನ್​ನಲ್ಲಿನ ತಮ್ಮ ಅಧಿಕೃತ ನಿವಾಸವನ್ನು ಅವರು ತೆರವುಗೊಳಿಸಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಇಡೀ ಭಾರತವೇ ನನ್ನ ಮನೆ ಎಂದು ಹೇಳಿದ್ದಾರೆ. -ಏಜೆನ್ಸೀಸ್