Massive Traffic Jam: ಕಳೆದ ಶುಕ್ರವಾರ (ಅ.03) ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 19ರ ಪಥಗಳು ಮತ್ತು ರಸ್ತೆ ಸೇವಾ ಮಾರ್ಗಗಳು ಜಲಾವೃತಗೊಂಡಿತು. ಈ ಹಿನ್ನೆಲೆ, ದೆಹಲಿ-ಕೋಲ್ಕತ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀಗಟ್ಟಲೇ ವಾಹನಗಳು ನಿಂತಿದ್ದು, ಮುಂದೆ ಹೋಗಲು ಸಾಧ್ಯವಾಗದ ಮಟ್ಟಿಗೆ ಸಂಚಾರ ದಟ್ಟಣೆ ಉಂಟಾಗಿದೆ. ಈ ದೃಶ್ಯಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.
ಇದನ್ನೂ ಓದಿ: ಇಂದೇ ನಿಮ್ಮ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ! ಇಲ್ಲದಿದ್ದರೆ ಇವು ನಿಮ್ಮ ಸಂಪತ್ತನ್ನು ಕಸಿದುಕೊಳ್ಳುತ್ತವೆ Vastu tips
ನೂರಾರು ಭಾರೀ ವಾಹನಗಳು ಕಳೆದ ನಾಲ್ಕು ದಿನಗಳಿಂದ ನಿಂತಲ್ಲೇ ನಿಂತಿದ್ದು, ಎಲ್ಲಿಯೂ ಹೋಗಲಾರದೆ, ತಮ್ಮ ವಾಹನಗಳಲ್ಲಿಯೂ ಕೂರಲಾಗದ ಸವಾಲಿನ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ಪರಿಹಾರ ಸಿಗದಿರುವುದು ಸದ್ಯ ವಾಹನ ಸವಾರರನ್ನು ಕಂಗಾಲಾಗಿಸಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 5 ಕಿ.ಮೀ ಮಾತ್ರ ವಾಹನಗಳು ಕ್ರಮಿಸಲು ಸಾಧ್ಯವಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ಬಗ್ಗೆ ವಾಹನ ಸವಾರರೊಬ್ಬರು ಮಾತನಾಡಿ, "ಕಳೆದ 30 ಗಂಟೆಗಳಲ್ಲಿ, ನಾವು ಕ್ರಮಿಸಿರುವುದು ಕೇವಲ 7 ಕಿ.ಮೀ ಅಷ್ಟೇ. ಟೋಲ್, ರಸ್ತೆ ತೆರಿಗೆ ಮತ್ತು ಇತರ ಖರ್ಚುಗಳನ್ನು ಪಾವತಿಸಿದರೂ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಅನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತದ ಅಧಿಕಾರಿ, ಸಿಬ್ಬಂದಿಗಳು ಯಾರೊಬ್ಬರೂ ಸಹ ರಸ್ತೆಯಲ್ಲಿ ಕಾಣಿಸುತ್ತಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ,(ಏಜೆನ್ಸೀಸ್).