ನವದೆಹಲಿ: ದರೋಡೆಕೋರರ ಗುಂಪೊಂದು ಟೀ ಅಂಗಡಿಯಲ್ಲಿ ಕುಳಿತಿದ್ದ ವ್ಯಕ್ತಿಯಿಂದ 75 ಲಕ್ಷ ಹಣವನ್ನು ದೋಚಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ (Theft in Thrissur) ಬೆಳಗಿನ ಜಾವ 4:30ರ ಸಮಯದಲ್ಲಿ ನಡೆದಿದೆ.
ಸಂತ್ರಸ್ತ ಎಡಪ್ಪಲ್ ಮೂಲದ ಮುಬಾರಕ್ ಎಂದು ತಿಳಿದುಬಂದಿದೆ. ಈತನು ಹಣವಿದ್ದ ಬ್ಯಾಗ್ನ್ನು ಮೆಡಿಕಲ್ ಶಾಪ್ ಪಕ್ಕದಲ್ಲಿ ಬಿಟ್ಟು, ವಾಶ್ ರೂಂ ಗೆ ಹೋಗಿ ಬರುತ್ತಿದ್ದಾಗ ಒಬ್ಬ ವ್ಯಕ್ತಿ ಬಂದು ಹಣತುಂಬಿದ ಬ್ಯಾಗ್ನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಮುಬಾರಕ್ ಆರೋಪಿಸಿದ್ದಾನೆ.
ಈ ಘಟನೆ ಕುರಿತು ಮಾತನಾಡಿದ ತ್ರಿಶೂರ್ ಪೊಲೀಸರು ಇನ್ನೋವಾ ಕಾರಿನಲ್ಲಿ ಬಂದ ಗ್ಯಾಂಗ್ ಬೆಳಗಿನ ಜಾವ 4:30 ಸುಮಾರಿಗೆ ಮುಬಾರಕ್ನ ಹಣವನ್ನು ಕದ್ದು ಪರಾರಿಯಾಗಿದ್ದಾರೆ. ಈ ಪ್ರಕರಣದ ಬಗ್ಗೆ ಅನುಮಾನವಿದ್ದು, ಸುಲಿಗೆ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುಬಾರಕ್ ಬೆಂಗಳೂರಿನಿಂದ ಖಾಸಗಿ ಬಸ್ನಲ್ಲಿ ಮುನ್ನತ್ತಿಗೆ ಬಂದು ಇಳಿದಿದ್ದರು. ಇವರು ತನ್ನ ಕಾರನ್ನು ಮಾರಿ ಹಣವನ್ನು ಪಡೆದಿದ್ದರು ಎಂದು ತಿಳಿಸಿದ್ದಾರೆ. ಅದೇ ರೀತಿಯಲ್ಲಿ ದರೋಡೆಕೋರರು ಬಂದ ಕಾರಿನ ಮುಂಭಾಗ ಮತ್ತು ಹಿಂಭಾಗದ ಸಂಖ್ಯೆಯು ಬಹಳ ವಿಭಿನ್ನವಾಗಿದ್ದವು. ಈ ದೂರಿನ ಕುರಿತು ತ್ರಿಶೂಲ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಗೌತಿ ನಂಬಿಕೆ ಉಳಿಸಿಕೊಂಡ ರಾಣಾ; ಸುಲಭ ರನ್ಔಟ್ ಮಿಸ್ ಮಾಡಿದ ಕ್ಯಾಪ್ಟನ್ ಗಿಲ್! ವಿಡಿಯೋ ವೈರಲ್ | IND vs AUS
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ತ್ರಿಶೂರ್ ಜಿಲ್ಲೆಯ ಮೂರು ಎಟಿಎಂಗಳಿಂದ ಬೆಳಗಿನ ಜಾವ 2 ಗಂಟೆ ಸುಮಾರಿಗೆ ದರೋಡೆಕೋರರ ಒಂದು ಗುಂಪು ಸುಮಾರು 70 ಲಕ್ಷ ಹಣವನ್ನು ದೋಚಿತ್ತು ಎಂದು ಪೊಲೀಸರು ತಿಳಿಸಿದ್ದರು. ಎಟಿಎಂಗಳ ಮೇಲ್ವಿಚಾರಣೆ ನಡೆಸುವ ಕೇಂದ್ರ ನಿಯಂತ್ರಣ ಕೊಠಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಕಳ್ಳತನ ಯತ್ನ ಪತ್ತೆಯಾಗಿದೆ. (ಏಜೆನ್ಸೀಸ್)