ನ್ಯೂಸ್

ಬೃಹತ್​ ಕಟ್ಟಡದಲ್ಲಿ ಕಾಣಿಸಿಕೊಂಡ ಭಾರೀ ಬೆಂಕಿ; ಮೂವರ ಸಾವು; 50 ಜನರ ರಕ್ಷಣೆ | Fire Breaks

Fire Breaks: ಗುಜರಾತ್​ನ ರಾಜ್​ಕೋಟ್​ ಪ್ರದೇಶವೊಂದರಲ್ಲಿ ಬೃಹತ್​​ ಗಾತ್ರದ ಆಪಾರ್ಟ್​ಮೆಂಟ್​ನಲ್ಲಿ ಬೆಂಕಿ ಕಾಂಣಿಸಿಕೊಂಡಿದೆ. ಈ ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಮೂವರು ಬಲಿಯಾಗಿದ್ದಾರೆ. ಅಲ್ಲದೆ ಕಟ್ಟಡದಲ್ಲಿ ಸಿಲುಕಿದ್ದ 50 ಮಂದಿಯನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

150 ಅಡಿ ರಿಂಗ್​ ರೋಡ್​ನಲ್ಲಿರುವ ಅಂಟ್ಲಾಟಿಸ್​ ಹೆಸರಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.ಬೆಂಕಿಯ ಕೆನ್ನಾಲಿಗೆ ಕಟ್ಟಡದ ಇತರ ಭಾಗಗಳಿಗೂ ಮತ್ತುಷ್ಟು ಅವರಿಸುತ್ತಿದೆ. ಆಗ್ನಿಶಾಮಕದಳ ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಇನ್ನು ಅಪಾರ್ಟ್​ಮೆಂಟ್​ನಲ್ಲಿ ಎಷ್ಟು ಜನರಿದ್ದಾರೆ ಎಂದು ತಿಳಿಯದು ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)