ನ್ಯೂಸ್

ಸೆಪ್ಟೆಂಬರ್​ ತಿಂಗಳಿಂದ ಏರಲಿದೆ, ಮಾರುತಿ ಕಾರುಗಳ ಬೆಲೆ!

ನವದೆಹಲಿ: ಬರುವ ಸೆಪ್ಟೆಂಬರ್​ ತಿಂಗಳಿಂದ ತನ್ನ ವಿವಿಧ ಮಾಡೆಲ್​ ಕಾರುಗಳ ಬೆಲೆಗಳನ್ನು ಏರಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ ಕಂಪೆನಿಯು ತಿಳಿಸಿದೆ. ಹಲವು ಇನ್​ಪುಟ್​ ಕಾಸ್ಟ್​ಗಳ ಹೆಚ್ಚಳವಾಗಿರುವ ಕಾರಣದಿಂದ ಕಂಪೆನಿ ಈ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ವರದಿಗಳು ತಿಳಿಸಿವೆ.

ಯಾವ ಮಾದರಿ ಕಾರಿನ ಮೇಲೆ ಎಷ್ಟು ಏರಿಕೆಯಾಗುತ್ತದೆ ಎಂದು ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಜೂನ್​​ ತಿಂಗಳಲ್ಲಿ ಸಲ್ಲಿಸಿದ ಹೇಳಿಕೆಯಲ್ಲೂ ಕಂಪೆನಿ ಸುಳಿವು ನೀಡಿತ್ತು.

"ಕಳೆದ ವರ್ಷದಲ್ಲಿ ವಿವಿಧ ಇನ್​ಪುಟ್​ ಕಾಸ್ಟ್​ಗಳ ಹೆಚ್ಚಳವು ಕಂಪೆನಿಯ ವಾಹನಗಳ ತಯಾರಿಕಾ ವೆಚ್ಚದ ಮೇಲೆ ವಿಪರೀತ ಪ್ರಭಾವ ಬೀರಿದೆ. ಹೀಗಾಗಿ ಈ ಹೆಚ್ಚುವರಿ ವೆಚ್ಚದ ಸ್ವಲ್ಪ ಪ್ರಮಾಣವನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸುವುದು ಅವಶ್ಯಕವಾಗಿದೆ. ಎಲ್ಲಾ ಮಾಡೆಲ್​ಗಳ ಮೇಲೆ ಸೆಪ್ಟೆಂಬರ್ 2021 ರಿಂದ ಬೆಲೆ ಏರಿಸಲು ಯೋಜಿಸಲಾಗಿದೆ" ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ ಎನ್ನಲಾಗಿದೆ. (ಏಜೆನ್ಸೀಸ್)