More

    ಪ್ರತಿದಿನ 5 ಲಕ್ಷ ಲಸಿಕೆ ನೀಡಲು ತೀರ್ಮಾನ; ವಾರಕ್ಕೊಮ್ಮೆ ಲಸಿಕೆ ಉತ್ಸವ!

    ಬೆಂಗಳೂರು: ಆಗಸ್ಟ್ ತಿಂಗಳಲ್ಲಿ ಕರ್ನಾಟಕಕ್ಕೆ 1 ಕೋಟಿ 10 ಲಕ್ಷ ಡೋಸ್​​ ಕರೊನಾ ಲಸಿಕೆ ಬಂದಿದೆ. ಕೇಂದ್ರ ಸರ್ಕಾರ ಮಾತು ಕೊಟ್ಟಂತೆ ಲಸಿಕೆ ಕಳಿಸಿದ್ದಾರೆ. ಇನ್ನು ಮುಂದೆ ಪ್ರತಿದಿನ 5 ಲಕ್ಷ‌ ಲಸಿಕೆ ನೀಡಲು ತೀರ್ಮಾನಿಸಿದ್ದೇವೆ. ಜೊತೆಗೆ, ಪ್ರತಿ ಗುರುವಾರ ಲಸಿಕೆ ಉತ್ಸವ ಮಾಡಲು ನಿರ್ಧರಿಸಿದ್ದು, ಈ ದಿನ 10 ಲಕ್ಷ ಲಸಿಕೆ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿದ್ದಾರೆ.

    ಇಂದು ಬೆಂಗಳೂರಿನಲ್ಲಿ ಲಸಿಕೆ ಬಗ್ಗೆ ನಡೆದ ವಿಶೇಷ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಈ ವಿಚಾರ ತಿಳಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಸುಮಾರು 5 ಕೋಟಿ ಕರೊನಾ ಲಸಿಕೆ ಡೋಸ್​ಗಳನ್ನು ನೀಡಲಾಗಿದೆ. ಲಸಿಕಾಕರಣ ಹೆಚ್ಚಿಸಲು ಹೊಸ ಕಾರ್ಯತಂತ್ರ ರೂಪಿಸುವ ಬಗ್ಗೆ ಸಮಾಲೋಚನೆ ನಡೆದಿದೆ. ಲಸಿಕಾ ಅಭಿಯಾನ ಯಶಸ್ವಿಯಾಗಲು ಸರ್ಕಾರದ ಜತೆ ಜನ ಕೈಜೋಡಿಸಬೇಕು ಎಂದರು.

    ಇದನ್ನೂ ಓದಿ: ಕಸದ ತೊಟ್ಟಿಯಲ್ಲಿ ಬಿದ್ದ ವಸ್ತು ಮಾರಿ ವಾರಕ್ಕೆ 75 ಸಾವಿರ ರೂ. ದುಡಿತೀರೋ ಮಹಿಳೆ!

    ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲಿಯವರೆಗೂ 1 ಕೋಟಿ ಲಸಿಕೆ ನೀಡಿ ಆಗಿದೆ. ಇಡೀ ರಾಜ್ಯದಲ್ಲಿ 4 ಕೋಟಿ ಲಸಿಕೆ ಆಗಿದೆ. ಇಡೀ ರಾಜ್ಯದಲ್ಲಿ ಶೇಕಡ 20 ರಷ್ಟು ಎರಡನೇ ಡೋಸ್ ಕೊಡಲಾಗಿದೆ. ಬೆಂಗಳೂರಿನಲ್ಲಿ ಶೇಕಡ 27 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಕೆಲ ಜಿಲ್ಲೆಗಳಲ್ಲಿ ಲಸಿಕೆ ನೀಡುವುದು ಹಿನ್ನಡೆಯಾಗಿದ್ದು ಆ ಕಡೆ ಹೆಚ್ಚು ಗಮನ ಹರಿಸಲಾಗುವುದು ಎಂದರು.

    ಬೆಂಗಳೂರಿನಲ್ಲಿ ಸ್ಲಂ ಪ್ರದೇಶದಲ್ಲಿ ಲಸಿಕೆ ಅಭಿಯಾನ ನಡೆಸಲಾಗುವುದು. ಗಡಿ ಭಾಗದ ಜಿಲ್ಲೆಗಳ ಹಳ್ಳಿಗಳಲ್ಲಿ ಲಸಿಕೆ ನೀಡಲಾಗುವುದು. ಕೇರಳ ಭಾಗದ 10 ಕಿಲೋಮೀಟರ್ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಲಸಿಕೆ ಕಡ್ಡಾಯವಾಗಿ ನೀಡಲು ಸೂಚನೆ ಜಾರಿಗೊಳಿಸಲಾಗುವುದು ಎಂದು ಸುಧಾಕರ್ ಹೇಳಿದರು.

    ಇದನ್ನೂ ಓದಿ: ಸೈಬರ್​​ ಕ್ರೈಂ ವಿಭಾಗದ ಹೆಡ್​​ ಕಾನ್ಸ್​​ಟೇಬಲ್ ಆತ್ಮಹತ್ಯೆ

    ಕರೊನಾ ಮೂರನೇ ಅಲೆ ಕೆಲವು ರಾಜ್ಯಗಳಲ್ಲಿ ಪ್ರಾರಂಭವಾಗಿದೆ. ನಮ್ಮ ರಾಜ್ಯಕ್ಕೆ ಮೂರನೇ ಅಲೆ ಕಾಲಿಟ್ಟಿಲ್ಲ. ಕಾಲಿಡಬಾರದೆಂದೇ ಕ್ರಮಗಳನ್ನ ತೆಗೆದುಕೊಳ್ತೇವೆ ಎಂದ ಆರೋಗ್ಯ ಸಚಿವ ಸುಧಾಕರ್, ಧಾರ್ಮಿಕ ಸಾಮರಸ್ಯ ಇರಬೇಕು. ಯಾವುದೇ ಹಬ್ಬಗಳಿಗೆ ಸರ್ಕಾರದ ವಿರೋಧವಿಲ್ಲ. ಎಲ್ಲರ ಹಿತವನ್ನ ಸರ್ಕಾರ ಕಾಪಾಡಬೇಕು. ಸಿಚುಯೇಷನ್ ಈಗ ಸರಿಯಿಲ್ಲ. ನಾವೇ ಮಾರ್ಗಸೂಚಿಗಳನ್ನ ಮಾಡಿಕೊಂಡಿದ್ದೇವೆ. ಆ ಮಾರ್ಗಸೂಚಿಗಳನ್ನ ನಾವೇ ಪಾಲನೆ ಮಾಡಬೇಕು. ಗಣೇಶ ಹಬ್ಬದ ಬಗ್ಗೆ ಸಂಜೆ ತೀರ್ಮಾನ ತೆಗೆದುಕೊಳ್ತೇವೆ ಎಂದರು.

    ನಮ್ಮ ಮೆಟ್ರೊ: ಇಂದಿನಿಂದ ಕೆಂಗೇರಿ ಟರ್ಮಿನಲ್ ಕಾರ್ಯಾರಂಭ; ರೈಲುಗಳ ವಿವರ ಇಲ್ಲಿದೆ

    ಬೆಳ್ಳಿ ಗೆದ್ದ ಭವೀನಾ ಪಟೇಲ್​​ಗೆ ತೆಂಡೂಲ್ಕರನ್ನು ಭೇಟಿಯಾಗುವಾಸೆ!

    ಲಾರಿಯಲ್ಲಿ ಗಿಡಗಳು ತುಂಬಿದ್ದವು… ಅವುಗಳ ಕೆಳಗಿತ್ತು ಭಾರೀ ಮೊತ್ತದ ಗಾಂಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts