More

    ಲಾರಿಯಲ್ಲಿ ಗಿಡಗಳು ತುಂಬಿದ್ದವು… ಅವುಗಳ ಕೆಳಗಿತ್ತು ಭಾರೀ ಮೊತ್ತದ ಗಾಂಜಾ!

    ಹೈದರಾಬಾದ್​/ಬೆಂಗಳೂರು: ನರ್ಸರಿಯಿಂದ ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ಸಾಗಿಸುತ್ತಿರುವ ಸೋಗಿನಲ್ಲಿ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಮೂವರು ದುಷ್ಕರ್ಮಿಗಳು ಪೊಲೀಸರ ವಶವಾಗಿದ್ದಾರೆ. ಭರ್ಜರಿ ಕಾರ್ಯಾಚರಣೆಯೊಂದರಲ್ಲಿ ಬೆಂಗಳೂರು ವಲಯ ಎನ್​ಸಿಬಿ ಅಧಿಕಾರಿಗಳು ಒಟ್ಟು 21 ಕೋಟಿ ರೂ. ಮೌಲ್ಯದ 3400 ಕೆಜಿ ಗಾಂಜಾವನ್ನು ಪತ್ತೆ ಹಚ್ಚಿದ್ದಾರೆ.

    ಲಾರಿಯಲ್ಲಿ ಗಿಡಗಳು ತುಂಬಿದ್ದವು... ಅವುಗಳ ಕೆಳಗಿತ್ತು ಭಾರೀ ಮೊತ್ತದ ಗಾಂಜಾ!

    ಒಟ್ಟು 131 ಗೋಣಿ ಚೀಲಗಳಲ್ಲಿ ಗಾಂಜಾ ಶೇಖರಿಸಿ ಸಾಗಾಟ ನಡೆಸುತ್ತಿದ್ದ ಸಿಂಧೆ, ಕಾಂಬ್ಳೆ ಮತ್ತು ಜೋಗದಂದ್ ಎಂಬುವರನ್ನು ಬಂಧಿಸಲಾಗಿದೆ. ಇವರು ಲಾರಿಯಲ್ಲಿ ಸಸಿಗಳ ರಾಶಿಯ ಕೆಳಗೆ ಮಣ್ಣಿನ ಜೊತೆ ಪ್ಲಾಸ್ಟಿಕ್​ನಿಂದ ಗಾಂಜಾ ಸುತ್ತಿ ಮಣ್ಣು ಮುಚ್ಚಿ ಸಾಗಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಬೆಳ್ಳಿ ಗೆದ್ದ ಭವೀನಾ ಪಟೇಲ್​​ಗೆ ತೆಂಡೂಲ್ಕರನ್ನು ಭೇಟಿಯಾಗುವಾಸೆ!

    ಈ ಮೂವರನ್ನು ಬಂಧಿಸಿರುವ ಪೊಲೀಸರು ಒಟ್ಟು 3400 ಕೆಜಿ ಗಾಂಜಾ ಸೀಜ್ ಮಾಡಿದ್ದಾರೆ. ಮಹಾರಾಷ್ಟ್ರ ರಿಜಿಸ್ಟ್ರೇಷನ್ ಹೊಂದಿರೋ ಲಾರಿಯಲ್ಲಿ ಈ ಗಾಂಜಾ ಸಾಗಾಟ ನಡೆಯುತ್ತಿತ್ತು. ಗಾಂಜಾ ದಂಧೆಯನ್ನು ತಂಡದ ಕಿಂಗ್​ಪಿನ್​​ ಮುಂಬೈ ಮೂಲಕ ಆಪರೇಟ್ ಮಾಡುತ್ತಿದ್ದು, ವಿವಿಧ ಗ್ಯಾಂಗ್​​ಗಳ ಮೂಲಕ ಗಾಂಜಾ ಸಪ್ಲೈ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ.

    ‘ನಮ್ಮ ಮೆಟ್ರೊ’ ನೇರಳೆ ಮಾರ್ಗ ವಿಸ್ತರಣೆಗೆ ಚಾಲನೆ: 6 ಹೊಸ ನಿಲ್ದಾಣಗಳ ಸೇರ್ಪಡೆ

    ಕಾಬುಲ್ ಮೇಲೆ ಮತ್ತೊಂದು ಆತಂಕವಾದಿ ದಾಳಿ ಸಾಧ್ಯತೆ: ಜೋ ಬಿಡೆನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts