ನ್ಯೂಸ್

ವೀರ್ ಪಹಾರಿಯಾ ಜತೆ ಮಾನುಷಿ ಛಿಲ್ಲರ್ ಡೇಟಿಂಗ್​​?; ಫ್ಯಾನ್ಸ್​​ ಪ್ರಶ್ನೆಗೆ ಕಾರಣವಾಗಿದ್ದು ಈ ವೀಡಿಯೊ…

ನವದೆಹಲಿ: ಮಾಜಿ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಮತ್ತು ವೀರ್ ಪಹಾರಿಯಾ ಡೇಟಿಂಗ್​​ ವದಂತಿ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ಸದ್ಯ ಜಾಲತಾಣದಲ್ಲಿ ವೈರಲ್​ ಆಗಿರವು ಒಂದು ವೀಡಿಯೊ. ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್​​​ನಲ್ಲಿ (ಎನ್‌ಎಂಎಸಿಸಿ) ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ಮಾನುಷಿ ಛಿಲ್ಲರ್ ಡ್ಯಾನ್ಸ್​ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವೀಡಿಯೋದಲ್ಲಿ ಮಾನುಷಿ ಛಿಲ್ಲರ್​ ಜತೆ ವೀರ್ ಪಹಾರಿಯಾ ಕೂಡ ಇದ್ದಾರೆ.

ನಟಿ ಜಾನ್ವಿ ಕಪೂರ್ ಅವರ ಗೆಳೆಯ ಶಿಖರ್ ಪಹಾಡಿಯಾ ಅವರ ಕಿರಿಯ ಸಹೋದರ ವೀರ್ ಪಹಾಡಿಯಾ ಅವರೊಂದಿಗೆ ಮಾನುಷಿ ಛಿಲ್ಲರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಊಹಿಸಿದ್ದಾರೆ. ಸಂಗೀತ ಸಮಾರಂಭದಲ್ಲಿ ಮಾನುಷಿ ಬೆಳ್ಳಿ ಬಣ್ಣದ ಲೆಹೆಂಗಾ ಧರಿಸಿದ್ದರೆ ವೀರ್ ಅದೇ ಬಣ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾನುಷಿ 2022ರಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಸಾಮ್ರಾಟ್ ಪೃಥ್ವಿರಾಜ್ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಇದರ ನಂತರ ವಿಕ್ಕಿ ಕೌಶಲ್ ಅವರ ದಿ ಗ್ರೇಟ್ ಇಂಡಿಯನ್ ಫ್ಯಾಮಿಲಿ, ಅಕ್ಷಯ್​​ ಕುಮಾರ್​​ ಮತ್ತು ಟೈಗರ್ ಶ್ರಾಫ್ ಅವರೊಂದಿಗೆ ಬಡೆ ಮಿಯಾನ್ ಛೋಟೆ ಮಿಯಾನ್​​ ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಹಿಂದೆ ಮಾನುಷಿ ಉದ್ಯಮಿ ನಿಖಿಲ್ ಕಾಮತ್ ಜತೆ ಡೇಟಿಂಗ್ ನಡೆಸುತ್ತಿದ್ದರು. ಆದರೆ ಅವರು ಕಳೆದ ವರ್ಷ ದೂರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವೀರ್ ಪಹಾಡಿಯಾ ಶೀಘ್ರದಲ್ಲೇ ಸ್ಕೈಫೋರ್ಸ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ. ವೀರ್ ಈ ಹಿಂದೆ ಜಾನ್ವಿ ಕಪೂರ್ ಅವರ ಆತ್ಮೀಯ ಸ್ನೇಹಿತೆ ಸಾರಾ ಅಲಿ ಖಾನ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಇತ್ತು. ಈ ಡೇಟಿಂಗ್​​ ಊಹಾಪೋಹಗಳ ಬಗ್ಗೆ ಮಾನುಷಿ ಮತ್ತು ವೀರ್ ಇಬ್ಬರೂ ಇನ್ನೂ ಪ್ರತಿಕ್ರಿಯಿಸಿಲ್ಲ. (ಏಜೆನ್ಸೀಸ್​​​)