

ನವದೆಹಲಿ: ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಅಸಮರ್ಥರು ರಚಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಅವರ ಆಕ್ಷೇಪಾರ್ಹ ಮತ್ತು ಮಾನಹಾನಿಕರ ಹೇಳಿಕೆಯನ್ನು ಹಿಂಪಡೆಯುವಂತೆ ಉಪಾಧ್ಯಕ್ಷ ಜಗದೀಪ್ ಧನ್ಖರ್ ಮನವಿ ಮಾಡಿದ್ದರು. ಆದರೆ ನಿರ್ಣಾಯಕ ಕ್ರಿಮಿನಲ್ ಬಿಲ್ಗಳನ್ನು ಕಾನೂನು ಆಯೋಗಕ್ಕೆ ಒಪ್ಪಿಸಿಬೇಕಿತ್ತು ಎಂದು ಹೇಳುವ ಮೂಲಕ ಪಿ.ಚಿದಂಬರಂ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಎಂಎಚ್ಎ ಕ್ರಿಮಿನಲ್ ಕಾನೂನಗಳ ಸುಧಾರಣೆಗಾಗಿ ಮೇ 2020ರಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಅಧ್ಯಕ್ಷರು, ಸಂಚಾಲಕರು ಮತ್ತು ಸದಸ್ಯರನ್ನು ಹೊಂದಿತ್ತು. ಸಮಿತಿಯಲ್ಲಿನ ಸದಸ್ಯರನ್ನು ಪದೇಪದೆ ಬದಲಾಯಿಸಲಾಯಿತು. ಅಂತಿಮವಾಗಿ ಸಮಿತಿಯು ಸಂಚಾಲಕ ಮತ್ತು ಐದು ಸದಸ್ಯರನ್ನು ಒಳಗೊಂಡಿತ್ತು. ಆದರೆ ಆ ಸಮಿತಿಯಲ್ಲಿ ನೇಮಕಗೊಂಡವರಲ್ಲಿ ಒಬ್ಬರನ್ನು ಹೊರತುಪಡಿಸಿ ಎಲ್ಲರೂ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಸಮಿತಿಯಲ್ಲಿ ಅರೆಕಾಲಿಕ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಅರೆಕಾಲಿಕ ಕೆಲಸ ಮಾಡುವ ಸದಸ್ಯರ ಸಮಿತಿಯು ಮೂರು ಹೊಸ ಕ್ರಿಮಿನಲ್ ಕಾನೂನುಗಳ ಕರಡುಗಳನ್ನು ಸಲ್ಲಿಸಸಿತು, ಅಂತಿಮವಾಗಿ ಸಂಸತ್ತು ಕಾನೂನುಗಳನ್ನು ಅಂಗೀಕರಿಸಿತು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇಂತಹ ನಿರ್ಣಾಯಕ ವಿಧೇಯಕಗಳ ಕರಡು ರಚನೆಯ ಜವಾಬ್ದಾರಿಯನ್ನು ಕಾನೂನು ಆಯೋಗಕ್ಕೆ ವಹಿಸಬೇಕಾಗಿತ್ತೆ ಹೊರತು ಅರೆಕಾಲಿಕ ಸೇವೆ ಸಲ್ಲಿಸುವ ಹಾಗೂ ಇತರೆ ಜವಾಬ್ದಾರಿ ಹೊಂದಿರುವ ಸಮಿತಿಗಲ್ಲ ಎಂದು ಹೇಳಿದ್ದಾರೆ. ಮೂರು ಹೊಸ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ 2023, ಭಾರತೀಯ ನ್ಯಾಯ ಸಂಹಿತಾ 2023, ಮತ್ತು ಭಾರತೀಯ ಸಾಕ್ಷಿ ಅಧಿನಿಯಮ 2023 ಜುಲೈ 1 ರಂದು ಜಾರಿಗೆ ಬಂದವು.ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು. (ಏಜೆನ್ಸೀಸ್)