ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಒಂದತ್ತ ರೈತರು ಹೋರಾಟ ನಡೆಸುತ್ತಿದ್ದರೆ ಇನ್ನೊಂದತ್ತ ಬಿಜೆಪಿ ನಾಯಕರು ಧರಣಿ ಕುಳಿತಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆ ಮುಂದೆ ನಡೆಸುತ್ತಿರುವ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭಿರ್ ಹಾಗೂ ಮನೋಜ್ ತಿವಾರಿ ಅವರು ಧರಣಿ ನಡೆಸುತ್ತಿದ್ದವರ ಜತೆ ಸೇರಿಕೊಂಡಿದ್ದಾರೆ.
ಇದನ್ನೂ ಓದಿ: ಸ್ಕೂಲ್ ಬ್ಯಾಗ್ ತೂಕ ಮತ್ತಷ್ಟು ಇಳಿಕೆ, ಹೋಂ ವರ್ಕ್ಗೂ ಬಿತ್ತು ಕತ್ತರಿ! ಈ ಕ್ಲಾಸಿನ ಮಕ್ಕಳಿಗೆ ಹೋಂ ವರ್ಕ್ ಇಲ್ಲವೇ ಇಲ್ಲ!
ಪೂರ್ವ, ಉತ್ತರ ಮತ್ತು ದಕ್ಷಿಣ ದೆಹಲಿಯ ಪುರಸಭೆ ನಿಗಮಗಳ ನಾಯಕರು ಫ್ಲಾಗ್ಸ್ಟಾಪ್ ರಸ್ತೆಯಲ್ಲಿರುವ ಸಿಎಂ ನಿವಾಸದ ಮುಂದೆ ಸೋಮವಾರದಿಂದ ಧರಣಿ ನಡೆಸುತ್ತಿದ್ದಾರೆ. ದೆಹಲಿ ಸರ್ಕಾರದಿಂದ ಬರಬೇಕಿದ್ದ 13 ಸಾವಿರ ಕೋಟಿ ರೂಪಾಯಿ ಬಾಕಿ ಪಾವತಿಸುವಂತೆ ಒತ್ತಾಯಿಸಿ ಧರಣೆ ನಡೆಸಲಾಗುತ್ತಿದೆ. ಮೇಯರ್ಗಳಾದ ಜಯಪ್ರಕಾಶ್, ಅನಾಮಿಕ ಮಿಥಿಲೇಶ್ ಹಾಗೂ ನಿರ್ಮಲ್ ಜೈನ್ ಧರಣಿ ಕುಳಿತಿದ್ದಾರೆ. ಇವರ ಜತೆ ಕೆಲ ಮಹಿಳಾ ಕೌನ್ಸಿಲರ್ಗಳೂ ಸಾಥ್ ಕೊಟ್ಟಿದ್ದಾರೆ.
ಇಂದು ಧರಣಿಯಲ್ಲಿ ಭಾಗವಹಿಸಿ ಮನೋಜ್ ತಿವಾರಿ ಅವರು ಮಾತನಾಡಿ, ಕೇಜ್ರಿವಾಲ್ ಜನಸಾಮಾನ್ಯರ ವಿರೋಧಿ ಎಂದು ಆರೋಪಿಸಿದ್ದಾರೆ. ಪುರಸಭೆಯ 13 ಸಾವಿರ ಕೋಟಿ ಹಣವನ್ನು ಅವರು ಇಟ್ಟುಕೊಂಡಿದ್ದಾರೆ. ನೈರ್ಮಲ್ಯ ಕಾರ್ಯಕರ್ತರು, ವೈದ್ಯರು ಶುಶ್ರೂಷಕಿಯರು ಮತ್ತು ಇತರೆ ಉದ್ಯೋಗಿಗಳಿಗೆ ವೇತನ ನೀಡಲು ಆ ಮೊತ್ತ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)