ನ್ಯೂಸ್

ಮಣ್ಣು ಹದವಾಗಲು ಒಪ್ಪದಿದ್ದರೆ ಮೂರ್ತಿ ಮಾಡಲು ಹೇಗೆ ಸಾಧ್ಯ; ಹಳೇ ಘಟನೆಯನ್ನು ನೆನೆದು ಖ್ಯಾತ ನಟಿಯ ಹೇಳಿಕೆ ವೈರಲ್​

ಮುಂಬೈ: ಬಾಲಿವುಡ್​ನ ದಿ ಮೋಸ್​ ಫೇವರಿಟ್​ ಎವರ್​ಗ್ರೀನ್​ ಬ್ಯೂಟಿ ಎಂದೇ ಹೆಸರುವಾಸಿಯಾಗಿರುವ ನಟಿ ಮನಿಷಾ ಕೊಯಿರಾಲಾ 53 ವರ್ಷವಾದ್ರು ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ ಎಂಬಂತೆ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಇತ್ತೀಚಿಗೆ ಬಿಡುಗಡೆಗೊಂಡ ಹೀರಾಮಂಡಿ ವೆಬ್​ ಸೀರೀಸ್​ನಲ್ಲಿ ಅವರ ಪಾತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಹಲವು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

ನೇಪಾಳ ಮೂಲದ ಈ ನಟಿ 1991ರಲ್ಲಿ ಸೌದಾಘರ್​ ಚಿತ್ರದ ಮೂಲಕ ಬಿ ಟೌನ್​ ಪ್ರವೇಶಿಸಿದರು. ಇದಾದ ಬಳಿಕ ಅವರು ದಿಲ್ ಸೇ, ಮನ್, ಇಂಡಿಯನ್ ಸೇರಿದಂತೆ ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಆದರೆ, ಈ ನಟಿ ಬಾಲಿವುಡ್​ ಪ್ರವೇಶಿಸಿದ ಹೊಸತರಲ್ಲಿ ತಮ್ಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದು, ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ನಾನು ಚಿತ್ರರಂಗ ಪ್ರವೇಶಿಸಿದ ಹೊಸತರಲ್ಲಿ ಫೋಟೋಶೂಟ್​ ಮಾಡಿಸುವಂತೆ ನಿರ್ದೇಶಕರು ಹೇಳಿದ್ದರು. ಆಗ ಅನೇಕರು ಖ್ಯಾತ ಫೋಟೋಗ್ರಾಫರ್​ ಒಬ್ಬರ ಹೆಸರನ್ನು ಹೇಳಿದರು. ಅದರಂತೆ ನಾನು ನನ್ನ ತಾಯಿಯನ್ನು ಕರೆದುಕೊಂಡು ಅವರ ಬಳಿ ಫೋಟೋ ತೆಗೆಸಲೆಂದು ಹೋದೆ. ಆಗ ಆತ ನನ್ನನ್ನು ನೋಡಿ ನೀವೇ ಮುಂದಿನ ಸ್ಟಾರ್ ಎಂದು ಹೊಗಳಿದರು ಬಳಿಕ ಫೋಟೋ ಕ್ಲಿಕ್ಕಿಸಲು ಬಿಕಿನಿ ಧರಿಸಿ ಬರುವಂತೆ ಹೇಳಿದ್ದರು. ನಾನು ಒಪ್ಪದಿದ್ದಾಗ ಅವರು ನನ್ನ ತಾಯಿಯ ಮುಂದೆಯೇ ಬಹಳ ಒತ್ತಾಯಿಸಿದರು.

ನಾನು ಬೀಚ್‌ಗೆ ಹೋದಾಗ ಅಥವಾ ಈಜಲು ಹೋದಾಗ ಮಾತ್ರ ಈ ರೀತಿ ಬಟ್ಟೆ ಧರಿಸುತ್ತೇನೆ. ಒಂದು ವೇಳೆ ಈ ರೀತಿಯಲ್ಲಿ ನಾನು ಸಿನಿಮಾ ಅವಕಾಶ ಪಡೆಯಬೇಕು ಎನ್ನುವುದಾದರೆ ಅದು ನನಗೆ ಬೇಡ. ನಾನು ಬಿಕಿನಿ ಧರಿಸುವುದಿಲ್ಲ. ನನ್ನ ಫೋಟೋ ತೆಗೆಯುವುದಾದರೆ ಪೂರ್ತಿ ಬಟ್ಟೆಯಲ್ಲೇ ತೆಗೆಯಿರಿ ಅಂತ ಆತನಿಗೆ ಹೇಳಿದೆ. ಆದರೆ, ಆ ಕ್ಷಣ ಆತ ಆಡಿದ ಆ ಒಂದು ಮಾತು ನನಗೆ ಈಗಲೂ ನೆನೆಪಿದೆ. ಮಣ್ಣು ಹದವಾಗಲು ಒಪ್ಪದಿದ್ದರೆ ನಾನು ಮೂರ್ತಿ ಮಾಡಲು ಹೇಗೆ ಸಾಧ್ಯ ಎಂದು ಹೇಳಿದ. ಈಗಳು ನನಗೆ ಆ ಮಾತು ನೆನಪಿದೆ.

ಅಂದು ಆತ ಆಡಿದ ಮಾತುಗಳನ್ನು ಕೇಳಿದಾಗ ಕೆಲವರ ಮನಸ್ಥಿತಿ ಹೇಗಿರುತ್ತದೆ ಎಂದು ತೋರಿಸುತ್ತದೆ. ಎಲ್ಲರೂ ಹೀಗೆ ಇರುವುದಿಲ್ಲ. ನಾನು ದೊಡ್ಡ ಸೆಲೆಬ್ರಿಟಿ ಆದ ಬಳಿಕ ಅದೇ ಫೋಟೊಗ್ರಫರ್ ನನ್ನ ಫೋಟೋ ಕ್ಲಿಕ್ಕಿಸಲು ಬಂದಿದ್ದರು. ನಾನು ಆತನಿಗೆ ಏನು ಹೇಳಲಿಲ್ಲ. ಆತನಿಗೆ ನಾನು ಅವಮಾನ ಮಾಡುತ್ತಿಲ್ಲ ನಡೆದ ಘಟನೆ ಬಗ್ಗೆ ಹೇಳುತ್ತಿದ್ದೇನೆ ಎಂದು ನಟಿ ಮನಿಷಾ ಕೊಯಿರಾಲಾ ಹಳೇ ಘಟನೆಯನ್ನು ಸಂದರ್ಶನದ ವೇಳೆ ನೆನೆದಿದ್ದಾರೆ.