ದೆಹಲಿ: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಕುಕಿ ಸಮುದಾಯದವರು ಕೇಂದ್ರ ಗೃಹಸಚಿವ ಅಮಿತ್ ಶಾ ನಿವಾಸದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.
ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ಕುಕಿ ಸಮುದಾಯದವರು ಫಲಕಗಳನ್ನು ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು. ಕುಕಿಗಳ ಜೀವವನ್ನು ರಕ್ಷಿಸಿ ಎಂಬ ಸಂದೇಶಗಳಿರುವ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ತದನಂತರ, ಗೃಹ ಸಚಿವರ ಜತೆಗಿನ ಮಾತುಕತೆ ನಾಲ್ವರು ಪ್ರತಿಭಟನಾಕಾರರಿಗೆ ಅವಕಾಶ ನೀಡಿ, ಉಳಿದ ಪ್ರತಿಭಟನಾಕಾರರನ್ನು ಜಂತರ್ ಮಂತರ್‌ಗೆ ಸ್ಥಳಾಂತರಿಸಲಾಯಿತು.
ಮಣಿಪುರದಲ್ಲಿ ಮೇ 3ರಂದು ಮೊದಲ ಬಾರಿಗೆ ಸಂಘರ್ಷಣೆಗಳು ಪ್ರಾರಂಭವಾದವು. ಒಂದು ತಿಂಗಳ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 98 ಜನರು ಮೃತಪಟ್ಟಿದ್ದು, ಕನಿಷ್ಠ 310 ಜನರು ಗಾಯಗೊಂಡಿದ್ದಾರೆ. ರಾಜ್ಯದ 272 ಪರಿಹಾರ ಶಿಬಿರಗಳಲ್ಲಿ ಒಟ್ಟು 37,450 ಜನರು ಆಶ್ರಯ ಪಡೆದಿದ್ದಾರೆ.(ಏಜೆನ್ಸೀಸ್)