ನ್ಯೂಸ್

ಮಗಳ ಮೇಲೆ ಐದು ವರ್ಷದಿಂದ ಅತ್ಯಾಚಾರ ಮಾಡಿದ ಪಾಪಿ ತಂದೆ!

ಲಕ್ನೋ: ವ್ಯಕ್ತಿಯೊಬ್ಬ ತನ್ನ ಮಲ ಮಗಳ ಮೇಲೆ ಐದು ವರ್ಷದಿಂದ ಅತ್ಯಚಾರ ನಡೆಸುತ್ತಾ ಬಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮಿರತ್ ಜಿಲ್ಲೆಯ ಸರ್ದಾನಾ ಎಂಬ ತಾಲೂಕಿನ ಕಳಂದಾ ಎಂಬಲ್ಲಿ ನಡೆದಿದೆ.

ಗಂಡನಿಂದ ವಿಚ್ಚೇದಿತಳಾಗಿದ್ದ 17 ವರ್ಷದ ಹೆಣ್ಣು ಮಗಳು ತನ್ನ ಮಲ ತಂದೆ ಪ್ರಕಾಶ್ ಸಿಂಗ್ ಎನ್ನುವವನ ಜೊತೆ ಕಳಂದಾದಲ್ಲಿ ನೆಲೆಸಿದ್ದಳು. ಅವಳಿಗೆ ಬೆದರಿಕೆ ಹಾಕುತ್ತಾ ಪ್ರಕಾಶ್ ಸಿಂಗ್ ಐದು ವರ್ಷದಿಂದ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆ ಹೆಣ್ಣು ಮಗಳು ದೂರಿದ್ದಾಳೆ.

ಮಿರತ್ ಜಿಲ್ಲಾ ಮಕ್ಕಳ ಸುರಕ್ಷಾ ಘಟಕಕ್ಕೆ ಕರೆ ಮಾಡಿ ನೋವು ತೋಡಿಕೊಂಡಿದ್ದ ಹೆಣ್ಣು ಮಗಳು , ಕಡೆಗೂ ಪೊಲೀಸರ ಸಹಾಯ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಆದರೆ ಆತ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.