ಗುರುಗ್ರಾಮ: ತನ್ನ ಕುಟುಂಬದ ಸದಸ್ಯರಿಗೆ ಚಿಕಿತ್ಸೆ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಆಸ್ಪತ್ರೆಯೊಳಗೆ ತನ್ನ ವಾಹನ ನುಗ್ಗಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಆರೋಗ್ಯ ಹದಗೆಟ್ಟಿದ್ದ ಕುಟುಂಬದ ಇಬ್ಬರ ಹಿರಿಯರಿಗೆ ಚಿಕಿತ್ಸೆ ಕೊಡಿಸಲು ಗುರುಗ್ರಾಮದ ಬಸಾಯಿ ಚೌಕ್ನಲ್ಲಿರುವ ಬಾಲಾಜಿ ಆಸ್ಪತ್ರೆಗೆ ಪಿಕ್ಅಪ್ ವಾಹನದಲ್ಲಿ ಕರೆತಂದಿದ್ದ. ಚಿಕಿತ್ಸೆ ನೀಡಲು ತಕರಾರು ತೆಗೆದಿದ್ದಕ್ಕೆ ವೈದ್ಯರೊಂದಿಗೆ ವಾಗ್ವಾದಕ್ಕೆ ಇಳಿದ ವ್ಯಕ್ತಿ ಕೋಪದಿಂದ ವಾಹನ ನುಗ್ಗಿಸಿದ್ದಾನೆ.
ಸುಮಾರು ಏಳೆಂಟು ಬಾರಿ ಆಸ್ಪತ್ರೆಯೊಳಗೆ ವಾಹನ ನುಗ್ಗಿಸಿದ್ದು, ಮೆಡಿಕಲ್ ಸ್ಟೋರ್ ಸೇರಿದಂತೆ 10 ರಿಂದ 15 ವಾಹನಗಳಿಗೆ ಹಾನಿಯಾಗಿದೆ. ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಮಾತನಾಡಿ ಬಾಲಾಜಿ ಆಸ್ಪತ್ರೆಯ ನಿರ್ದೇಶಕ ಡಾ. ಬಲ್ವಾನ್ ಸಿಂಗ್, ನಾವು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆಂದು ಹೇಳಿದ್ದಾರೆ. (ಏಜೆನ್ಸೀಸ್)