ನ್ಯೂಸ್

ಪತ್ನಿಯನ್ನು ಕೊಂದು ಶವ ತುಂಡು ತುಂಡು ಮಾಡಿ ವಾಟರ್​ ಟ್ಯಾಂಕ್​ನೊಳಕ್ಕೆ ಹಾಕಿದ್ದ; ತಿಂಗಳ ಬಳಿಕ ವಿಷಯ ಬಹಿರಂಗ

ಬಿಲಾಸ್​​ಪುರ: ಸಾಯಿಸುವುದೇ ಕ್ರೌರ್ಯ. ಅದರಲ್ಲೂ ಕೊಂದು ಶವವನ್ನು ಕತ್ತರಿಸಿ ತುಂಡು ತುಂಡು ಮಾಡುವಂಥ ಕ್ರೌರ್ಯ ಇತ್ತೀಚೆಗೆ ಹೆಚ್ಚಾಗಿದೆ. ಅದರಲ್ಲೂ ಇಲ್ಲೊಬ್ಬ ಪತ್ನಿಯನ್ನು ಕೊಂದು ತುಂಡು ತುಂಡು ಮಾಡಿ ಶವದ ಭಾಗಗಳನ್ನು ವಾಟರ್​ ಟ್ಯಾಂಕ್​ಗೆ ಹಾಕಿಟ್ಟ ಪ್ರಕರಣವೊಂದು ನಡೆದಿದೆ.

ಛತ್ತೀಸ್​ಘಡದ ಬಿಲಾಸ್​ಪುರದ ಉಸ್ಲಾಪುರ ಎಂಬಲ್ಲಿ ಈ ಘಟನೆ ನಡೆದಿದೆ. ಪವನ್​ಸಿಂಗ್ ಠಾಕೂರ್ ಕೊಲೆ ಮಾಡಿದ ಆರೋಪಿ. ಈತ ಪತ್ನಿಯನ್ನು ಕೊಲೆ ಮಾಡಿ ತುಂಡು ತುಂಡಾಗಿಸಿ ವಾಟರ್​ ಟ್ಯಾಂಕ್​ನೊಳಗೆ ಹಾಕಿದ್ದ. ಹತ್ತಿರದ ಮನೆಯವರು ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದ್ದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವಿಷಯ ಬಹಿರಂಗಗೊಂಡಿದೆ. ಪವನ್ ಪತ್ರಿ ಸತಿ ಸಾಹು ಕೊಲೆಯಾದ ಮಹಿಳೆ.

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಒಂದು ತಿಂಗಳ ಹಿಂದೆ ಕೊಲೆಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ. ಇನ್ನೊಂದೆಡೆ ಶವದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈತ ಪತ್ನಿಯ ಶೀಲ ಶಂಕಿಸಿ ಈ ಕೊಲೆ ಮಾಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.