ನವದೆಹಲಿ: ಈತ ಅತ್ಯಂತ ವಿಕ್ಷಿಪ್ತ ವ್ಯಕ್ತಿ. ಏಕೆಂದರೆ ಈತ ವ್ಯಕ್ತಿಯೊಬ್ಬನನ್ನು ಕೊಂದಿದ್ದಷ್ಟೇ ಅಲ್ಲ, 15 ವರ್ಷಗಳ ಕಾಲ ಆ ಶವವನ್ನು ಮನೆಯಲ್ಲೇ ಇರಿಸಿಕೊಂಡಿದ್ದ. ಇಂಥದ್ದೊಂದು ಪ್ರಕರಣ ತಡವಾಗಿ ಬೆಳಕಿಗೆ ಬಂದು, ಮತ್ತೊಮ್ಮೆ ಸುದ್ದಿಯಾಗಿ ಹರಿದಾಡಲಾರಂಭಿಸಿದೆ.
ಅಷ್ಟಕ್ಕೂ ಇದು ನಡೆದಿದ್ದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ. ಅಲ್ಲಿನ ಬ್ರೂಸ್ ರಾಬರ್ಟ್ಸ್ ಎಂಬಾತನ ಮನೆಗೆ ಸುಲಿಗೆಕೋರ ಶ್ನೇನ್ ಶ್ನೆಲ್ಮ್ಯಾನ್ ಎಂಬಾತ ನುಗ್ಗಿದ್ದು, ಆತನನ್ನು ಗುಂಡಿಟ್ಟು ಕೊಂದಿದ್ದ. ಮಾತ್ರವಲ್ಲ ಆತನ ಶವವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದ. ಇನ್ನು ವಾಸನೆ ಬರಬಾರದು ಎಂಬ ಕಾರಣಕ್ಕೆ 70 ಏರ್ ಫ್ರೆಷನರ್ ಬಾಟಲಿಗಳನ್ನು ಬಳಸಿದ್ದ.
ಇದನ್ನೂ ಓದಿ: ಸಾಯುವವನು ಎಲ್ಲಿ ಬೇಕಾದ್ರೂ ಸಾಯಲಿ, ನಾನು ಇಲ್ಲಿ ಕೋವಿಡ್ ಸೆಂಟರ್ ತೆರೆಯಲ್ಲ: ಬಿಜೆಪಿ ಶಾಸಕರ ಖಡಾಖಂಡಿತ ಮಾತು
ಅಂದಹಾಗೆ ಇದು 2002ರಲ್ಲಿ ನಡೆದಿದ್ದು, 2017ರಲ್ಲಿ ರಾಬರ್ಟ್ ಮೃತಪಟ್ಟಾಗ ಈ ವಿಷಯ ಸ್ಥಳೀಯರಿಂದಾಗಿ ಬೆಳಕಿಗೆ ಬಂದಿದೆ. ಆತನ ಸಾವಿನ ಬಳಿಕ ಆತನಿದ್ದ ಮನೆ ಕ್ಲೀನ್ ಮಾಡಲಿಕ್ಕೇ ಸಾಕಷ್ಟು ಸಮಯ ತೆಗೆದುಕೊಂಡಿದ್ದು, ಅಲ್ಲಿ ಡಜನ್ಗೂ ಅಧಿಕ ಕೋವಿಗಳು ಪತ್ತೆಯಾಗಿವೆ. ಈ ಎಲ್ಲದರ ಕುರಿತು ವಿದೇಶಿ ಮಾಧ್ಯಮವೊಂದು ಗುರುವಾರ ಸುದ್ದಿ ಪ್ರಕಟಿಸಿದೆ.