ನ್ಯೂಸ್

ಬಿಸಿಲಿನ ಝಳ ತಾಳಲಾರದೆ ಟಾಯ್ಲೆಟ್​ಗೂ AC ಅಳವಡಿಸಿದ ವ್ಯಕ್ತಿ; ವಿಡಿಯೋ ವೈರಲ್

ನವದೆಹಲಿ: ಉತ್ತರ ಭಾರತದ ಹಲವೆಡೆ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಬಿಸಿಲಿನ ಬೇಗೆ ತಾಳಲಾರದೆ ಹಲವರು ಮೃತಪಟ್ಟಿದ್ದಾರೆ. ಐಎಂಡಿ ಸೂಚನೆ ಮೇರೆಗೆ ಕೆಲವೆಡೆ ರಜೆ ಘೋಷಿಸಲಾಗಿದ್ದು, ನಿರ್ದಿಷ್ಟ ಸಮಯದಲ್ಲಿ ಹೊರಬಾರದಂತೆ ಸೂಚಿಸಲಾಗಿದೆ. ಇತ್ತ ಬಿಸಿಲಿನ ಝಳದಿಂದ ಕಂಗೆಟ್ಟಿರುವ ಜನರು ಹೆಚ್ಚಾಗಿ ಎಸಿಗಳ ಮೊರೆ ಹೋಗುತ್ತಿದ್ದು, ಇದಕ್ಕಾಗಿ ಡಿಮ್ಯಾಂಡ್​ ಹೆಚ್ಚಾಗಿದೆ ಎಂದು ವರದಿಯಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಈ ವ್ಯಕ್ತಿ ಟಾಯ್ಲೆಟ್​ನಲ್ಲಿ ಕೂಡ ಎಸಿ ಅಳವಡಿಸುವ ಮಟ್ಟಿಗೆ ಬಿಸಿಲು ಕಾಡುತ್ತಿದೆ ಎಂದರೆ ನೀವು ನಂಬುತ್ತೀರಾ.

ವೃತ್ತಿಯಲ್ಲಿ ಎಸಿ ಟೆಕ್ನಿಷಿಯನ್​ ಆಗಿ ಕೆಲಸ ಮಾಡುತ್ತಿರುವ ಹಸೀನ್​ ಖಾನ್​ ಎಂಬ ವ್ಯಕ್ತಿಯು ಬಿಡುವಿನ ಸಮಯದಲ್ಲಿ ಬ್ಲಾಗ್​ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿ ಹಾಕುತ್ತಾರೆ. ದೆಹಲಿ ಮೂಲದವರಾದ ಇವರು ಇತ್ತೀಚಿಗೆ ಮನೆ ಒಂದಕ್ಕೆ ಎಸಿ ರಿಪೇರಿ ಮಾಡಲು ಹೋಗಿದ್ದರು. ಈ ವೇಳೆ ಬಿಸಿಲಿನ ಝಳ ತಾಳಲಾರದೆ ವ್ಯಕ್ತಿಯೊಬ್ಬರು ಟಾಯ್ಲೆಟ್​ನಲ್ಲೀ ಕೂಡ ಎಸಿ ಆಳವಡಿಸಿರುವುದನ್ನು ಕಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ಮಿಲಿಯನ್​ ವೀವ್ಸ್ ಹಾಗೂ ಲಕ್ಷಾಂತರ ಲೈಕ್ಸ್​ ಪಡೆಯುವಲ್ಲಿ ಯಶಸ್ವಿಯಾಗಿದೆ.

ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಜನರು ನಾವು ಇಷ್ಟು ಶ್ರೀಮಂತರಾಗುವುದು ಯಾವಾಗ ಎಂದು ಕಮೆಂಟ್​ ಮಾಡಿದ್ದಾರೆ. ಕೆಲವರು ಇದು ನನ್ನ ಕನಸಿನ ವಾಶ್​ರೂಂ ಎಂದು ಕಮೆಂಟ್​ ಮಾಡಿದರೆ. ಇನ್ನೂ ಕೆಲವರು ಟಾಯ್ಲೆಟ್​ನಲ್ಲಿ ಎಸಿ ಅಳವಡಿಸಿರುವ ಮಾಲೀಕನ ನಡೆಯನ್ನು ಟೀಕಿಸಿ ಕಮೆಂಟ್​ ಮಾಡಿದ್ದಾರೆ.