ನ್ಯೂಸ್

ಗರ್ಭಿಣಿ ಹೆಂಡತಿ ಮತ್ತು ಮಗಳನ್ನು ಕೊಂದ ಪಾಪಿ ಗಂಡ! ಮೂರನೇ ಮದುವೆಯಾದರೂ ಮುಗಿಯಲಿಲ್ಲ ಜಗಳ

ಲಖನೌ: ಮನೆಯಲ್ಲಿ ನಡೆದ ಸಣ್ಣ ಕಲಹದಿಂದಾಗಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಹೆಂಡತಿ ಮತ್ತು ನಾಲ್ಕು ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಗ್​ಪತ್​ನಲ್ಲಿ ನಡೆದಿದೆ.

ಗುಲ್ಫಮ್​ (30)ಗೆ ಮುಸ್ಕನ್​ (22) ಮೂರನೇ ಹೆಂಡತಿಯಾಗಿದ್ದಳು. ದಂಪತಿಗೆ ಆಯತ್ (4) ಹೆಸರಿನ ಮಗಳಿದ್ದು, ಇನ್ನೊಂದು ಮಗು ಮುಸ್ಕನ್​ ಗರ್ಭದಲ್ಲಿ ಬೆಳೆಯುತ್ತಿತ್ತು. ಗುಲ್ಫಮ್​ ನಗರದಲ್ಲಿ ಕ್ಷೌರದಂಗಡಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದ. ಆತ ಕ್ಯಾನ್ಸರ್​ನಿಂದ ಬಳಲುತ್ತಿದ್ದನಂತೆ.

ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತಂತೆ. ಸೋಮವಾರದಂದೂ ಅದೇ ರೀತಿಯ ಜಗಳವಾಗಿದ್ದು, ಗುಲ್ಫಮ್​ ಹೆಂಡತಿ ಮತ್ತು ಮಗಳ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನೇ ಪೊಲೀಸ್​ ಠಾಣೆಗೆ ಬಂದು ನಡೆದ ಘಟನೆ ತಿಳಿಸಿ, ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್​)