More

    ಹೇರ್​ ಸ್ಪ್ರೇ ಖಾಲಿಯೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಬೆಡಗಿ! ಮುಂದೇನಾಯ್ತು ನೀವೇ ನೋಡಿ..

    ವಾಷಿಂಗ್ಟನ್​: ಕೂದಲು ಬಾಚಿಕೊಂಡ ಮೇಲೆ ಅದು ಹರಡದಿರಲಿ ಎಂದು ಹೇರ್​ ಸ್ಪ್ರೇ ಹಾಕುವುದು ಮಾಮೂಲು. ಆದರೆ ಈ ಮಹಿಳೆ ಮಾಡಿರುವ ಕೆಲಸ ನೋಡಿದರೆ ನಿಮಗೆ ನಗು ಬರುವುದು ಗ್ಯಾರಂಟಿ. ಹೇರ್​ ಸ್ಪ್ರೇ ಖಾಲಿಯಾಯಿತೆಂದು ತಲೆಗೆ ಗೋರಿಲ್ಲಾ ಗ್ಲೂ ಹಚ್ಚಿಕೊಂಡ ಯುವತಿಯ ಕಥೆ ಏನಾಯಿತು ಎನ್ನುವುದನ್ನು ನೀವೇ ನೋಡಿ.

    ಟೆಸ್ಸಿಕಾ ಬ್ರೌನ್​ ಹೆಸರಿನ ಮಹಿಳೆ ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಜತೆಗೆ ಟಿಕ್​ಟಾಕ್​ ಸ್ಟಾರ್​. ಆಕೆಯ ಹೇರ್​ ಸ್ಪ್ರೇ ಇತ್ತೀಚೆಗೆ ಖಾಲಿ ಆಯಿತಂತೆ. ಅದಕ್ಕಾಗಿ ಆಕೆ ಗೋರಿಲ್ಲಾ ಗ್ಲೂ ಅನ್ನು ತಲೆಗೆ ಹಾಕಿಕೊಳ್ಳುವ ಉಪಾಯ ಮಾಡಿದ್ದಾಳೆ. ಅದರಂತೆ ಹಾಕಿಕೊಂಡಿದ್ದಾಳೆ ಕೂಡ. ಆ ಗ್ಲೂ ಹಾಕಿಕೊಂಡ ತಕ್ಷಣ ಆಕೆಯ ಕೂದಲು ತಲೆಗೆ ಗಟ್ಟಿಯಾಗಿ ಅಂಟಿಕೊಂಡಿದೆ. ಏನೇ ಮಾಡಿದರೂ ಒಂದೇ ಒಂದು ಕೂದಲೂ ಸಹ ಅಲುಗಾಡದಷ್ಟು ಗಟ್ಟಿಯಾಗಿ ಅಂಟಿಕೊಂಡಿದೆ. 15-20 ಬಾರಿ ಶಾಂಪು ಹಾಕಿ ತಲೆ ತೊಳೆದರೂ ಅಂಟು ಮಾತ್ರ ಬಿಟ್ಟುಕೊಂಡಿಲ್ಲ.

    ಕೂದಲಿನ ಈ ಅವಸ್ಥೆಯನ್ನು ಟೆಸ್ಸಿಕಾ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಟೆಸ್ಸಿಕಾಳ ವಿಡಿಯೋವನ್ನು ಮೊದಮೊದಲು ನೆಟ್ಟಿಗರು ತಮಾಷೆ ಎಂದೇ ತೆಗೆದುಕೊಂಡಿದ್ದಾರೆ. ಆದರೆ ಕಷ್ಟವನ್ನು ತಾಳಲಾರದೆ ಆಕೆ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ, ವಿಡಿಯೋವನ್ನೂ ಹಂಚಿಕೊಂಡ ನಂತರ ಜನರು ಅವಳಿಗೆ ಪಾಪವೆಂದು ಹೇಳತೊಡಗಿದ್ದಾರೆ. (ಏಜೆನ್ಸೀಸ್​)

    ಕೇರಳದಲ್ಲೂ ಲವ್​ ಜಿಹಾದ್​ ವಿರುದ್ಧ ಕಾನೂನು; ಬಿಜೆಪಿ ಭರವಸೆ

    ಒಂದು ಮೊಬೈಲ್ ಕರೆಯಿಂದ 12 ಜನರ ಜೀವ ಉಳಿಯಿತು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts