ನ್ಯೂಸ್

ತಾಯಿಗೆ ಕಿರುಕುಳ ಕೊಡುತ್ತಿದ್ದ ತಂದೆಯ ಜೀವ ತೆಗೆದ ಮಗ!

ಮಹಾರಾಷ್ಟ್ರ: ತಾಯಿಯನ್ನು ಥಳಿಸಿದ್ದಕ್ಕೆ ಸಿಟ್ಟಾದ ಮಗ, ತಂದೆಯನ್ನೇ ಹತ್ಯೆ ಮಾಡಿರುವ ಘಟನೆ ಥಾಣೆ ಜಿಲ್ಲೆಯ ಅಂಬರನಾಥ್ ಎಂಬಲ್ಲಿ ನಡೆದಿದೆ. ಇದೀಗ ಆರೋಪಿ ಪ್ರಕಾಶ್(19) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಪತಿಯಿಂದ ಕಿರುಕುಳ

ಮೃತ ರಾಜೇಶ್ ವರ್ಮಾ(52) ಆಗಾಗ್ಗೇ ಪತ್ನಿಯನ್ನು ನಿಂದಿಸಿ ಹಲ್ಲೆ ನಡೆಸುತ್ತಿದ್ದ. ಅಂತೆಯೇ ಕಳೆದ ಭಾನುವಾರ ಮಧ್ಯಾಹ್ನ ಏಕಾಏಕಿ ಥಳಿಸಲು ಆರಂಭಿಸಿದ್ದಾನೆ. ಈ ವೇಳೆ ಮನೆಯಲ್ಲಿದ್ದ ಮಗ ಪ್ರಕಾಶ್ ತಾಯಿಗೆ ಹೊಡೆಯುವುದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾನೆ. ಆದರೆ ಮಗನ ಮಾತು ಕೇಳದ ರಾಜೇಶ್ ಪತ್ನಿಯನ್ನು ಹಿಂಸಿಸಿದ್ದಾನೆ.

ಚಾಕುವಿನಿಂದ ಇರಿತ

ತನ್ನ ತಾಯಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವುದರಿಂದ ಬೇಸತ್ತ ರಾಜೇಶ್, ತಂದೆಯ ಹೊಟ್ಟೆಗೆ ಹಲವು ಬಾರಿ ಚಾಕು ಇರಿದಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕೂಡಲೇ ಗಂಭೀರವಾಗಿ ಗಾಯಗೊಂಡಿದ್ದ ರಾಜೇಶ್​ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಜೀವ ಹೋಗಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಉಲ್ಲಾಸನಗರ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.