More

    ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಟೀಮ್​​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ!

    ದೆಹಲಿ: ಸಿನಿಮಾ ರಂಗಕ್ಕೂ, ಕ್ರೀಡೆಗಳಿಗೆ ಹಿಂದಿನಿಂದಲೂ ನಂಟಿದೆ ಎಂಬುದು ಗೊತ್ತಿರುವ ವಿಚಾರ. ಅದರಲ್ಲೂ ಕ್ರಿಕೆಟ್​ ಆಟಗಾರರು ಹಾಗೂ ಬಾಲಿವುಡ್​ ಸಿನಿಮಾ ನಟಿಯರ ಲವ್​, ಡೇಟಿಂಗ್​, ಮದುವೆಯ ವಿಚಾರಗಳು ಎಲ್ಲರಿಗೂ ತಿಳಿದಿದೆ. ಸದ್ಯ, ಟೀಮ್​ ಇಂಡಿಯಾದ ಆರಂಭಿಕ ಆಟಗಾರ ಶುಬ್​ಮನ್​​ ಗಿಲ್​ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

    ಕ್ರಿಕೆಟ್​ ಬಿಟ್ಟು ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ಗಿಲ್ ಸಿನಿಮಾವೊಂದಕ್ಕೆ ಡಬ್ಬಿಂಗ್ ಮಾಡಿದ ಅನುಭವವನ್ನು ಸ್ವತಃ ತಮ್ಮ ಇನ್ಸ್ಟಾಗ್ರಾಮ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್​ ಲೋಕದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಗಿಲ್​ ಇದೀಗ ಅನಿಮೇಟೆಡ್ ಸಿನಿಮಾಗೆ ಧ್ವನಿಯಾಗಿದ್ದಾರೆ.

    ಇದನ್ನೂ ಓದಿ: ಡಿವೋರ್ಸ್​ ಆಗಿದೆ.. ನನ್ನ ಮದುವೆ ಪೋಟೋ ಬೇಡ, ಹಣ ವಾಪಸ್​ ಕೊಡಿ: ಪೋಟೋಗ್ರಾಫರ್​ಗೆ ಮಹಿಳೆ ಅವಾಜ್​

    ಸ್ಪೈಡರ್​ ಮ್ಯಾನ್​- ಅಕ್ರಾಸ್​ ದಿ ಸ್ಪೈಡರ್​ ವರ್ಸ್​ ಎಂಬ ಹಿಂದಿ ಮತ್ತು ಪಂಜಾಬಿ ಚಿತ್ರದ ಆವೃತ್ತಿಗಳ ಮುಖ್ಯ ನಾಯಕನ ಪಾತ್ರಧಾರಿಗೆ ಧ್ವನಿ ನೀಡಿದ್ದಾರೆ. ಈ ಅನಿಮೇಟೆಡ್ ಚಿತ್ರದ ಟ್ರೇಲರ್​​ ಜೂನ್ 2ರಂದು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

    ಐಪಿಎಲ್ 2023ರಲ್ಲಿ ಶುಭ್​ಮನ್ ಗಿಲ್ ಗುಜರಾತ್ ಟೈಟಾನ್ಸ್‌ ಪರವಾಗಿ ಆಡುತ್ತಿದ್ದು, ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಲ್ಲಿಯವರೆಗೆ 11 ಪಂದ್ಯಗಳಲ್ಲಿ 46.90 ಸರಾಸರಿಯಲ್ಲಿ 469 ರನ್ ಗಳಿಸಿದ್ದಾರೆ. ಅವರು ಈ ಋತುವಿನಲ್ಲಿ 4 ಅರ್ಧ ಶತಕ ಗಳಿಸಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts