More

    ಡಿವೋರ್ಸ್​ ಆಗಿದೆ.. ನನ್ನ ಮದುವೆ ಪೋಟೋ ಬೇಡ, ಹಣ ವಾಪಸ್​ ಕೊಡಿ: ಪೋಟೋಗ್ರಾಫರ್​ಗೆ ಮಹಿಳೆ ಅವಾಜ್​

    ದೆಹಲಿ: ಇಂದಿನ ದಿನಮಾನಗಳಲ್ಲಿ ಪೋಟೋ ಶೂಟಿಂಗ್​ ಒಂದು ಟ್ರೆಂಡ್​ ಆಗಿದೆ. ಜನರು ತಮ್ಮ ವಿಶೇಷ ಕ್ಷಣಗಳನ್ನು ಸೆರೆ ಹಿಡಿಯಲು ಮದುವೆ, ಹುಟ್ಟು ಹಬ್ಬ, ನಾಮಕರಣ ಹೀಗೆ ಹಲವಾರು ಸಂದರ್ಭಗಳಲ್ಲಿ ಪೋಟೋಗ್ರಾಫರ್​ನನ್ನು ನೇಮಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಉತ್ತಮ ಪೋಟೊ ಸೆರೆಹಿಡಿದಿದ್ದಕ್ಕಾಗಿ ಅವರ ಕೆಲಸ ಮೆಚ್ಚಿ, ಮತ್ತೆ ಸಂಪರ್ಕಿಸುತ್ತಾರೆ.

    ಇಲ್ಲೊಬ್ಬ ಮಹಿಳೆ ತನ್ನ ಮದುವೆಯ ಪೋಟೋಗ್ರಾಫರ್​ನನ್ನು 4 ವರ್ಷಗಳ ನಂತರ ಸಂಪರ್ಕಿಸಿದ್ದಾಳೆ. ಆದರೆ ಈ ಬಾರಿ ಪೋಟೋಶೂಟ್​ಗಾಗಿ ಅಲ್ಲ. ಬದಲಾಗಿ ಈ ಹಿಂದೆ ನೀಡಿದ ಹಣವನ್ನು ಮರಳಿ ನೀಡುವಂತೆ ಕೇಳಿದ್ದು, ಸದ್ಯ ಈ ವಾಟ್ಸಾಪ್​ ಚಾಟ್​​ ಎಲ್ಲೆಡೆ ಹರಿದಾಡುತ್ತಿದೆ.

    ಮೊದಮೊದಲು ಪೋಟೋಗ್ರಾಫರ್​ ಇದನ್ನ ಚೇಷ್ಟೆ ಎಂದೇ ಭಾವಿಸಿದ್ದ. ಕೊನೆಗೆ ಅವಳ ವೈವಾಹಿಕ ಸ್ಥಿತಿಯ ಕಾರಣದಿಂದಾಗಿ ನಿಜವಾಗಿಯೂ ಹಣವನ್ನು ಕೇಳುತ್ತಿದ್ದಾಳೆ ಎಂಬುದನ್ನು ಅರಿತಿದ್ದಾನೆ. ಆದರೆ ಹಣವನ್ನು ಹಿಂದಿರುಗಿಸುವ ಆಕೆಯ ವಿನಂತಿಯನ್ನು ನಿರಾಕರಿಸಿದ್ದಾನೆ.

    ಇದನ್ನೂ ಓದಿ: ಹೆತ್ತ ಮಗುವನ್ನು ಮೂರು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ತಾಯಿ ಅರೆಸ್ಟ್​!

    ನಂತರ ಅವರಿಬ್ಬರ ನಡುವಿನ ಈ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಈ ಸಂಭಾಷಣೆ ವೈರಲ್​ ಆಗಿದೆ. ಮೊದಲಿಗೆ ತನ್ನನ್ನು ತಾನು ಪರಿಚಯ ಮಾಡಿಕೊಂಡ ಮಹಿಳೆ, ನೀವು ಇನ್ನೂ ನನ್ನನ್ನು ನೆನಪಿಟ್ಟುಕೊಂಡಿದ್ದೀರಿ ಇಲ್ಲವೋ ನನಗೆ ಗೊತ್ತಿಲ್ಲ.

    2019ರಲ್ಲಿ ನೀವು ಡರ್ಬನ್‌ನಲ್ಲಿ ನಡೆದ ನನ್ನ ಮದುವೆಯಲ್ಲಿ ಫೋಟೋಶೂಟ್ ಮಾಡಿದ್ರಿ. ನಾನು ಈಗ ವಿಚ್ಛೇದನ ಪಡೆದಿದ್ದು, ನನಗೆ ಮತ್ತು ನನ್ನ ಮಾಜಿ ಪತಿಗೆ ಇನ್ನು ಮುಂದೆ ಆ ಪೋಟೋಗಳ ಅಗತ್ಯವಿಲ್ಲ. ಹೀಗಾಗಿ, ನಾನು ನಿಮಗೆ ನೀಡಿದ ಹಣವನ್ನು ನಮಗೆ ವಾಪಸ್ಸು ಮಾಡಿ ಎಂದು ಕೇಳಿದ್ದಾಳೆ.

    ಇದಕ್ಕೆ ಉತ್ತರಿಸಿದ ಪೋಟೋಗ್ರಾಫರ್​, ನಾನು ಆ ಪೋಟೋಗಳನ್ನು ಈಗಾಗಲೇ ಸೆರೆಹಿಡಿದಿದ್ದು, ಹಣ ಮರುಪಾವತಿ ಸಾಧ್ಯವಿಲ್ಲ ಎಂದಿದ್ದಾನೆ. ಇದರಿಂದ ರೊಚ್ಚಿಗೆದ್ದ ಮಹಿಳೆ ಅವನ ಮೇಲೆ ಕೇಸ್​ ಹಾಕುವುದಾಗಿ ಬೆದರಿಸಿದ್ದಾಳೆ. ಇದಕ್ಕೆ ಆತ​ ಕೂಡ ಒಪ್ಪಿದ್ದ. ಈ ಚಾಟ್​ ವೈರಲ್​ ಆದ ತಕ್ಷಣವೇ ಮಹಿಳೆಯ ಮಾಜಿ ಪತಿ ಪೋಟೋಗ್ರಾಫರ್​ನನ್ನು ಕ್ಷಮಾಪಣೆ ಕೋರಿದ್ದಾನೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts