ನ್ಯೂಸ್

VIDEO | ಬಿಯರ್‌ನಿಂದ ಚಲಿಸುವ ಬೈಕ್; ಗಂಟೆಗೆ 240 ಕಿಮೀ ವೇಗ

ನವದೆಹಲಿ: ಸಮಾಜ ಬೆಳೆಯುತ್ತಿದೆ. ಹಾಗೆ ತಂತ್ರಜ್ಞಾನವು ಬೆಳೆಯುತ್ತಿದೆ. ಹೊಸ ಆವಿಷ್ಕಾರಗಳನ್ನು ಮಾನವರು ಮಾಡುತ್ತಿದ್ದಾರೆ. ಪೇಟ್ರೋಲ್​, ಡಿಸೇಲ್​ ಹಾಗೂ ವಿದ್ಯುತ್​ ಚಾಲಿತವಾಗಿ ಚಲಿಸುವ ವಾಹನವನ್ನು ಮಾನವರು ಆವಿಷ್ಕಾರ ಮಾಡಿದ್ದಾರೆ. ಆದರೆ ಒಂದು ಹೆಜ್ಜೆ ಮುಂದೆ ಹೋಗಿ ಇಲ್ಲೊಬ್ಬ ಯುವಕ ಬಿಯರ್ ಚಾಲಿತ ಮೋಟಾರ್‌ಸೈಕಲ್ ಅನಾವರಣ ಮಾಡಿದ್ದಾನೆ.

ತನ್ನ ಅಸಾಮಾನ್ಯ ಆವಿಷ್ಕಾರಗಳಿಗೆ ಸಂಚಲನ ಮೂಡಿಸಿರುವ ಅಮೆರಿಕದ ಮೈಕೆಲ್ಸನ್, ತಮ್ಮ ಇತ್ತೀಚಿನ ಸೃಷ್ಟಿಯೇ ಈ ಬಿಯರ್ ಚಾಲಿತ ಮೋಟಾರ್‌ಸೈಕಲ್ ಆಗಿದೆ. ಈ ಬೈಕ್​ ಇನ್ನೂ ರಸ್ತೆಗೆ ಇಳಿದಿಲ್ಲ. ಆದರೆ ಇದು ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ.

ಮೈಕೆಲ್ಸನ್ ಇಂತಹದ್ದೊಂದು ವಿಶೇಷ ಬೈಕ್ ಕಂಡುಹಿಡಿದಿದ್ದಾರೆ. ಮೈಕೆಲ್ಸನ್ ಈ ಬೈಕ್ ಅನ್ನು ಬ್ಲೂಮಿಂಗ್ಟನ್‌ನಲ್ಲಿರುವ ತನ್ನ ಗ್ಯಾರೇಜ್‌ನಲ್ಲಿ ನಿರ್ಮಿಸಿದ್ದಾರೆ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಬದಲಿಗೆ ಇದು ಬಿಯರ್‌ನಿಂದ ಚಲಿಸುತ್ತದೆ. ಈ ಬೈಕ್ ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಬೈಕ್‌ಗೆ ಅನಿಲ ಚಾಲಿತ ಎಂಜಿನ್ ಬದಲು ಹೀಟಿಂಗ್ ಕಾಯಿಲ್ ಅನ್ನು ಬಳಸಲಾಗಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಗಳ ವರೆಗೆ ಬಿಸಿ ಮಾಡಿ ಬೈಕ್ ಮುಂದೆ ಚಲಿಸುವಂತೆ ಮಾಡುತ್ತದೆ.

ಬೈಕ್​​ನ ವಿಶೇಷತೆ:

"ಅತ್ತ ಇಂಧನದ ಬೆಲೆ ಏರಿಕೆಯಾಗುತ್ತಿದೆ. ನಾನು ಮದ್ಯಪಾನ ಮಾಡಲ್ಲ. ಹೀಗಾಗಿ ಬೈಕ್ ಚಲಿಸುವಂತೆ ಮಾಡಲು ಇಂಧನದ ಬದಲು ಬಿಯರ್ ಅನ್ನು ಬಳಸಿದರೆ ಹೇಗೆ ಎಂದು ನಾನು ಯೋಚಿಸಿ ಮಾಡಿದ್ದೇನೆ" ಎಂದು ಮೈಕೆಲ್ಸನ್ ಹೇಳಿದ್ದಾರೆ.