ಅಬುಜಾ: ಕೆಲವು ಜನರಿಗೆ ಡಿಫರೆಂಟ್ ಲೈಫ್ಸ್ಟೈಲ್ ಇಷ್ಟವಾಗುತ್ತದೆ. ಡಿಫರೆಂಟ್ ಆಗಿರಬೇಕೆಂದು ಅವರು ಮಾಡುವ ಕೆಲಸಗಳು ನೋಡುಗರ ಕಣ್ಣಿಗೆ ಹಾಸ್ಯಾಸ್ಪದವಾಗಿಬಿಡುತ್ತದೆ. ಇಲ್ಲೊಬ್ಬ ವ್ಯಕ್ತಿಯೂ ಕೂಡ ಡಿಫರೆಂಟ್ ಜೀವನವನ್ನು ಬಾಳಲು ಬಯಸುತ್ತಾನಂತೆ. ಡಿಫರೆಂಟ್ ಗುಂಗಿಗೆ ಬಿದ್ದ ಈತ ಇದೀಗ ಆರು ಪತ್ನಿಯರನ್ನು ಏಕಕಾಲದಲ್ಲಿ ಗರ್ಭಿಣಿಯರಾಗಿ ಮಾಡಿದ್ದಾನೆ.
ನೈಜೀರಿಯಾದ ಪ್ಲೇಬಾಯ್ ಎಂದೇ ಪ್ರಸಿದ್ಧವಾಗಿರುವ ಪ್ರೆಟ್ಟಿ ಮೈಕ್ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾನೆ. ಇದೀಗ ತನ್ನ ಸ್ನೇಹಿತನೊಬ್ಬನ ಮದುವೆಗೆ ಹೋದ ಆತ, ವಧು ವರರಿಗಿಂತ ಹೆಚ್ಚು ಸುದ್ದಿಯಾಗಿದ್ದಾನೆ.
ಪ್ರೆಟ್ಟಿ ಮೈಕ್ ಇತ್ತೀಚೆಗೆ ಸ್ನೇಹಿತ ವಿಲಿಯಂ ಅವರ ಮದುವೆಗೆ ತನ್ನ ಆರು ಪತ್ನಿಯರನ್ನು ಕರೆದುಕೊಂಡು ಹೋಗಿದ್ದ. ವಿಶೇಷವೆಂದರೆ ಆತನ ಆರೂ ಪತ್ನಿಯರು ಗರ್ಭಿಣಿಯರು. ಎಲ್ಲರಿಗೂ ಒಂದೇ ತೆರನಾದ ಡ್ರೆಸ್ ಹಾಕಿಸಿಕೊಂಡು ಮದುವೆಗೆ ಕರೆದುಕೊಂಡು ಹೋಗಿದ್ದ ಆತ ತನ್ನ ಪತ್ನಿಯರನ್ನು ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದಾನೆ. ಅವರ ಹೊಟ್ಟೆಯಲ್ಲಿರುವ ಮಗುವಿಗೆ ನಾನೇ ಅಪ್ಪ ಎಂದು ಹೇಳಿಕೊಂಡಿದ್ದಾನೆ. ಮದುವೆಗೆ ಬಂದವರೆಲ್ಲರೂ ವಧು ವರರನ್ನು ನೋಡುವುದು ಬಿಟ್ಟು ಮೈಕ್ನ ಕುಟುಂಬವನ್ನೇ ನೋಡುತ್ತಿದ್ದರಂತೆ.
ಮೈಕ್ ಈ ರೀತಿ ವಿಚಿತ್ರ ಕೆಲಸ ಮಾಡಿ ಹೆಸರಾಗಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಯುವತಿಯರನ್ನು ಕುದುರೆಗಳಂತೆ ಕಟ್ಟಿ, ತಾನು ಸಾರಥಿಯಂತೆ ನಿಂತು ಫೋಸ್ ಕೊಟ್ಟ ಫೋಟೋ ಹಂಚಿಕೊಂಡಿದ್ದ. ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡಿದ್ದ ಆತನ ಮೇಲೆ ಪೊಲೀಸ್ ಪ್ರಕರಣವೂ ದಾಖಲಾಗಿತ್ತು. (ಏಜೆನ್ಸೀಸ್)