ಲಖನೌ: ಅನಾರೋಗ್ಯದಿಂದ ಬಳಲುತ್ತಿದ್ದ 19 ವರ್ಷದ ಮಗಳನ್ನು ತಂದೆ ಬೈಕ್ನಲ್ಲೇ ಆಸ್ಪತ್ರೆಗೆ ಕರೆದೊಯ್ದು ಅದಾದ ನಂತರ ಅದೇ ಬೈಕ್ನಲ್ಲಿ ಆಕೆಯ ಶವವನ್ನು ವಾಪಾಸು ತೆಗೆದುಕೊಂಡು ಬಂದಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ನಡೆದಿದೆ.
ಫಿರೋಜಾನಾದ್ನ ತುಂಡ್ಲಾದ ಜಾರೌಲಿ ಕಲಾ ಗ್ರಾಮದ ಶಿವನಾರಾಯಣ ಅವರ ಮಗಳು ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಇದ್ದಕ್ಕಿದ್ದಂತೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ತಂದೆ ಅವಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ನಮ್ಮಲ್ಲಿ ಆಕ್ಸಿಜನ್ ಇಲ್ಲ ಹಾಗಾಗಿ ಆಕ್ಸಿಜನ್ ಕೊಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಅದಾಗಲೇ ಗಂಭೀರ ಸ್ಥಿತಿಗೆ ಹೋಗಿದ್ದ ಮಗಳು ಅಲ್ಲಿಯೇ ಕೊನೆಯುಸಿರೆಳೆದಿದ್ದಾಳೆ.
ಸರ್ಕಾರಿ ಆಸ್ಪತ್ರೆಗಳ ನಿಯಮದ ಪ್ರಕಾರ, ಶವವನ್ನು ಆ್ಯಂಬುಲೆನ್ಸ್ನಲ್ಲಿ ಅಥವಾ ಬೇರೆ ಗಾಡಿಯಲ್ಲಿ ಕಳುಹಿಸಿಕೊಡಬೇಕು. ಆದರೆ ಅದಕ್ಕೂ ಗಾಡಿ ಇಲ್ಲದಿರುವುದಾಗಿ ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ. ನಂತರ ಮಗಳ ಮೃತ ದೇಹವನ್ನು ತಂದೆ ಬೈಕ್ನಲ್ಲೇ ವಾಪಾಸು ತಂದಿದ್ದಾನೆ. ಇದೀಗ ಪೂರ್ತಿ ಕುಟುಂಬ ಕಣ್ಣೀರು ಹಾಕುತ್ತಿದೆ. (ಏಜೆನ್ಸೀಸ್)