ಒಂದೇ ಆ್ಯಂಬುಲೆನ್ಸ್​ನೊಳಗೆ 22 ಕರೊನಾ ಸೋಂಕಿತರ ಹೆಣ! ವಿಡಿಯೋ ಮಾಡಲು ಬಿಡದೆ ಮೊಬೈಲ್​ ಕಿತ್ತುಕೊಂಡ ಪೊಲೀಸರು

ಸಸಸಸಸಸಸಸಸಸಸ
Published on

ಮುಂಬೈ: ದೇಶಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಪ್ರತಿನಿತ್ಯ ಸಾವಿರಾರು ಸೋಂಕಿತರು ಸಾವನ್ನಪ್ಪುತ್ತಿದ್ದ, ಆ ಶವಗಳ ಅಂತ್ಯಸಂಸ್ಕಾರವೇ ದೊಡ್ಡ ಸವಾಲಾಗಿದೆ. ಅದೇ ಹಿನ್ನೆಲೆಯಲ್ಲಿ ಒಂದೇ ಆ್ಯಂಬುಲೆನ್ಸ್​ ಒಳಗೆ 22 ಕರೊನಾ ಸೋಂಕಿತರ ಶವಗಳನ್ನು ಹೊತ್ತೊಯ್ದಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.

ಬೀಡ್​ ಜಿಲ್ಲೆಯಲ್ಲಿ ಒಂದೇ ಆ್ಯಂಬುಲೆನ್ಸ್​ನಲ್ಲಿ 22 ಸೋಂಕಿತರ ಶವಗಳನ್ನು ತುಂಬಿಸಿ, ಅದನ್ನು ಸ್ಮಶಾನಕ್ಕೆ ಒಯ್ದು ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರು. ದೃಶ್ಯವನ್ನು ಕೆಲ ಸೋಂಕಿತರ ಸಂಬಂಧಿಗಳು ವಿಡಿಯೋ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರ ಮೊಬೈಲ್​ಗಳನ್ನು ಪೊಲೀಸರು ಕಸಿದಿಟ್ಟುಕೊಂಡಿದ್ದಾರೆ. ಅಂತ್ಯಕ್ರಿಯೆಯಾದ ನಂತರ ಮೊಬೈಲ್​ ವಾಪಾಸು ಮಾಡಿದ್ದಾರೆ ಎಂದು ಘಟನೆಯನ್ನು ಕಣ್ಣಾರೆ ಕಂಡ ಕೆಲವರು ಹೇಳಿದ್ದಾರೆ.

ಆ್ಯಂಬುಲೆನ್ಸ್​ನಲ್ಲಿದ್ದ ಶವಗಳಲ್ಲಿ 14 ಶವಗಳು ಶನಿವಾರ ಸತ್ತವರದ್ದಾಗಿದ್ದರೆ ಇನ್ನುಳಿದ ಶವಗಳು ಭಾನುವಾರ ಸತ್ತವರದ್ದು ಎನ್ನಲಾಗಿದೆ. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆದ್ದ ಜಿಲ್ಲಾಡಳಿತ ಪ್ರಕರಣದ ಬಗ್ಗೆ ತನಿಖೆಗೆ ಮುಂದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net