ನ್ಯೂಸ್

ಅವಾಚ್ಯ ಶಬ್ದಗಳಿಂದ ನಿಂದನೆ; ಪಕ್ಕದ ಮನೆ ಯುವಕನ ಶಿರಚ್ಛೇದ ಮಾಡಿದ ವ್ಯಕ್ತಿ

Webdesk - Manjunatha B

ಜೈಪುರ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮಕೈಗೊಂಡರು ಯಾವುದೇ ಪ್ರಯೋಜನವಾಗುತ್ತಿಲ್ಲ.

ಇದೀಗ ಪ್ರಕರಣ ಒಂದರಲ್ಲಿ ನೆರೆಮನೆಯವನ ತಲೆ ಕಡಿದು ಹತ್ಯೆ ಮಾಡಿರುವ ರಾಜಸ್ಥಾನದ ಜಾಲೋರ್​ ಜಿಲ್ಲೆಯಲ್ಲಿ ನಡೆದಿದ್ದು ಇಡೀ ರತಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ಕಿಶೋರ್​ ಸಿಂಗ್​(23) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಆರೋಪಿ ಸಂಕ್ಲಾರಾಮ್ ಭೀಲ್ (50)ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ಧಾರೆ.

ಕುಡಿದ ಮತ್ತಿನಲ್ಲಿ ಗಲಾಟೆ

ಆರೋಪಿ ಹಾಗೂ ಮೃತ ದುರ್ದೈವಿ ಇಬ್ಬರು ನೆರೆಹೊರೆಯವರಾಗಿದ್ದು ಕುಡಿದ ಮತ್ತಿನಲ್ಲಿ ಕಿಶೋರ್​ ಸಿಂಗ್​ ಭೀಲ್​ ಮೊಮ್ಮಗನನ್ನು ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದನ್ನು.

ವಿಚಾರ ತಿಳಿದು ಸಿಟ್ಟಿಗೆದ್ದ ಆರೋಪಿ ಕಿಶೋರ್ ಮೇಲೆ ಕೊಡಲಿ ಇಂದ ಆತನ ತಲೆ ಕಡಿದು ಕೊಲೆ ನಡೆದ ಜಾಗದಿಂದ 150 ಮೀಟರ್ ಮುಂದಕ್ಕೆ ಎಸೆದಿದ್ಧಾನೆ.

ಇದನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದು ಕುಟುಂಬಸ್ಥರು ಕಠಿಣ ಕಾರಾಗೃಹ ಶಿಕ್ಷೆಗೆ ಆಗ್ರಹಿಸಿದ್ದಾರೆ.