More

    ಸ್ವಸ್ತಿಕ್​ ಚಿಹ್ನೆ ತಂದ ಆಪತ್ತು; ಸಮಸ್ಯೆಯಲ್ಲಿ ಸಿಲುಕಿಕೊಂಡ ಭಾರತ ಮೂಲದ ಕುಟುಂಬ

    ಜೆಡ್ಡಾ: ಸ್ವಸ್ತಿಕ ಚಿಹ್ನೆಯೂ ಭಾರತೀಯರ ಪಾಲಿಗೆ ಮಂಗಳಕರವಾಗಿದ್ದು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಹೊಸ ವಾಹನ ಹಾಗೂ ಗೃಹಪ್ರವೇಶದ ಸಮಯದಲ್ಲಿ ಮನೆಯ ದ್ವಾರದ ಮೇಲೆ ಮುದ್ರಿಸಲಾಗುತ್ತದೆ.

    ಇದೀಗ ಇದೇ ಸ್ವಸ್ತಿಕ್​​ ಚಿಹ್ನೆಯೂ ಭಅರಥಿಯ ಮೂಲದವರಿಗೆ ಕಂಟಕವಾಗಿದ್ದು ಸಹಾಯಕ್ಕಾಗಿ ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ.

    ಚಿಹ್ನೆ ತಂದ ಆಪತ್ತು

    ವೃತ್ತಿಯಲ್ಲಿ ಇಂಜಿನಿಯರ್​ ಆಗಿರುವ ಗುಂಟೂರು ಮೂಲದ ಅರವಿಂದ್​ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿರುವ ಪೂರ್ವ ಪ್ರಾಂತ್ಯಕ್ಕೆ ತಮ್ಮ ಫ್ಲ್ಯಾಟ್​ಅನ್ನು ಬದಲಾಯಿಸಿದ್ದರು.

    ತಮ್ಮ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ್​ ಚಿಹ್ನೆಯನ್ನು ಸಹ ಬರದು ತಮ್ಮ ಹೊಸ ಮೆನೆಗೆ ಅಡಿಯಿಟ್ಟು ಜೀವನವನ್ನ ಪ್ರಾರಂಭಿಸಿದ್ದರು.

    swastik symbol

    ತಪ್ಪು ಗ್ರಹಿಕೆ

    ನೆರೆಯ ಮನೆಯಲ್ಲಿ ವಾಸವಿದ್ದ ಅರಬ್​ ವ್ಯಕ್ತಿ ಇದನ್ನು ತಪ್ಪಾಗಿ ಗ್ರಹಿಸಿ ತಮ್ಮ ಮನೆಯ ಬಾಗಿಲಿನ ಮೇಲೆ ನಾಜಿ ಲಾಂಛನವನ್ನು ಬರೆದಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾನೆ.

    ಆದರೆ, ವಾಸ್ತಾವಾಂಶದಲ್ಲಿ ನಾಜಿ ಲಾಂಛನವೂ ಸ್ವಸ್ತಿಕ್​ ಚಿಹ್ನೆಗಿಂತ ಭಿನ್ನವಾಗಿದ್ದು ಇದರ ಬಗ್ಗೆ ಅರಬ್​ ವ್ಯಕ್ತಿಗೆ ವ್ಯತ್ಯಾಸ ತಿಳಿದು ಬಂದಿಲ್ಲ. ಈ ಕುರಿತು ಮೊದಲು ಅರವಿಂದ್​ ಹಾಗೂ ಕುಟುಂಬಸ್ಥರಿಗೆ ಲಾಂಛನವನ್ನು ಅಳಿಸುವಂತೆ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: VIDEO| ಕ್ಷಣಾರ್ಧದಲ್ಲೇ ಬಾಲಕನನ್ನು ರಕ್ಷಿಸಿದ ಅಂಪೈರ್​; ವ್ಯಾಪಕ ಮೆಚ್ಚುಗೆ

    ಬಿಡುಗಡೆಗೆ ಆಗ್ರಹ

    ಇದನ್ನು ನಿರಾಕರಿಸಿದ್ದ ಅರವಿಂದ್​ ಕುಟುಂಬಸ್ಥರು ಸಿದ್ಧಾಂತದ ಜೊತೆಗೆ ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕುಪಿತಗೊಂಡ ಅರಬ್​ ವ್ಯಕ್ತಿ ಪೊಲೀಸರ ಗಮನಕ್ಕೆ ತಂದಿದ್ದು ಅವರು ಅರವಿಂದ್​ನನ್ನು ಬಂಧಿಸಿದ್ಧಾರೆ.

    ಇ ವಿಚಾರವಾಗಿ ಅರವಿಂದ್​ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು ಯಾರಿಗೂ ನೋವು ಕೊಡುವ ಉದ್ದೇಶದಿಂದ ನಾವು ಚಿಹ್ನೆಯನ್ನುಇ ಬರೆದಿಲ್ಲ. ಅವರ ತಪ್ಪು ಗ್ರಹಿಕೆಯಿಂದ ಇಷ್ಟೆಲ್ಲಾ ಆಗಿದೆ. ದಯವಿಟ್ಟು ಅವರನ್ನು ಬಿಡಿಸಲು ಸಹಾಯ ಮಾಡಿ ಎಂದು ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗೆ ವಿನಂತಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts