ಹೈದರಾಬಾದ್: ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೊನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಆದಿಪುರುಷ್ ಶುಕ್ರವಾರ(ಜೂನ್ 16) ರಂದು ವಿಶ್ವದಾದ್ಯಂತ ತೆರೆ ಕಂಡಿದೆ.
ಬಿಡುಗಡೆಗೂ ಮುನ್ನ ತೀವ್ರ ಕುತೂಹಲ ಮೂಡಿಸಿದ್ದ ಆದಿಪುರುಷ್ ಚಿತ್ರವು ಕಳಪೆ VFX ಸೇರಿದಂತೆ ಅನೇಕ ವಿಚಾರಗಳಿಗೆ ಹೆಚ್ಚು ಸದ್ದು ಮಾಡಿತ್ತು. ಈ ಸಿನಿಮಾ ಜಾಗತಿಕವಾಗಿ 7,000ಕ್ಕೂ ಅಧಿಕ ಥಿಯೇಟರ್ಗಳಲ್ಲಿ ಬಿಡುಗಡೆ ಜೂನ್ 16ರಂದು ಬಿಡುಗಡೆಯಾಗಿದೆ.
ತಮ್ಮ ನೆಚ್ಚಿನ ನಟನ ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಪ್ರಭಾಸ್ ಅಭಿಮಾನಿಗಳ ವರ್ತನೆ ಮಿತಿ ಮೀರಿದ್ದು, ಸಿನಿಮಾದ ಕುರಿತು ಕೆಟ್ಟದ್ದಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿ ಒಬ್ಬರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಇದಾದ ಬಳಿಕ ಅಭಿಮಾನಿಯೋರ್ವ ಬಿಯರ್ ಬಾಟಲ್ನಿಂದ ಕೈ ಕೊಯ್ದುಕೊಂಡು ಪ್ರಭಾಸ್ಗೆ ಜೈಕಾರ ಹಾಕಿ ಅತಿರೇಕದ ವರ್ತನೆ ತೋರಿರುವ ವಿಡಿಯೋಗಳು ವೈರಲ್ ಆಗಿವೆ.
ಇದನ್ನೂ ಓದಿ: ಬಿಯರ್ ಬಾಟಲ್ನಿಂದ ಕೈ ಕೊಯ್ದುಕೊಂಡು ಪ್ರಭಾಸ್ಗೆ ಜೈಕಾರ: ಅಭಿಮಾನಿಯ ಅತಿರೇಕದ ವರ್ತನೆ, ವಿಡಿಯೋ ವೈರಲ್
ಚಿತ್ರ ಪ್ರದರ್ಶನಗೊಳ್ಳುತ್ತಿರುವ ಥಿಯೇಟರ್ಗಳಲ್ಲಿ ಒಂದು ಸೀಟ್ಅನ್ನು ಆಂಜನೇಯನಿಗೆ ಕಾಯ್ದಿರಿಸುವಂತೆ ಸಿನಿಮಾದ ನಿರ್ದೇಶಕ ಓಂ ರಾವತ್ ಮನವಿ ಮೇರೆಗೆ ಮಾಲೀಕರು ಆಸನವನ್ನು ರಾಮ ಬಂಟನಿಗೆ ಮೀಸಲಿಟ್ಟಿದ್ಧಾರೆ. ಕಾಯ್ದಿರಿಸಿದ ಆಸನದಲ್ಲಿ ಕೇಸರಿ ಬಟ್ಟೆ, ಆಂಜನೇಯನ ಫೋಟೋ, ಹಣ್ಣುಗಳನ್ನು ಇಟ್ಟು ಪೂಜೆ ಸಹ ಮಾಡಲಾಗಿದೆ.
ಆಂಜನೇಯ ಸ್ವಾಮಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಂಡಿದ್ದಕ್ಕಾಗಿ ವ್ಯಕ್ತಿಯೊಬ್ಬನ್ನು ಪ್ರಭಾಸ್ ಅಭಿಮಾನಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಹೈದರಾಬಾದಿನ ಬ್ರಹ್ಮರಂಬ ಚಿತ್ರಮಂದಿರದಲ್ಲಿ ನಡೆದಿದೆ. ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದ್ದು, ಅತಿರೇಕದ ವರ್ತನೆ ಎಂದು ನೆಟ್ಟಿಗರು ಕಿಡಿಕಾರಿದ್ಧಾರೆ.