ನ್ಯೂಸ್

ನಟ ಅರ್ಜುನ್​ ಕಪೂರ್ ಜತೆ ಲವ್ವಿಡವ್ವಿ, ಬ್ರೇಕಪ್​​! ಕಡೆಗೂ ಮೌನಮುರಿದ 50ರ ಬೆಡಗಿ ಮಲೈಕಾ ಅರೋರಾ | Malaika Arora

ಮುಂಬೈ: ‘ಚಯ್ಯಾ ಚಯ್ಯಾ’ ಹಾಡಿನಿಂದಲೇ ಸಿನಿಪ್ರಿಯರ ಮನಗೆದ್ದ ಬಾಲಿವುಡ್​ನ ನಟಿ, 50 ವರ್ಷವಾದ್ರೂ ಇನ್ನೂ ತನ್ನ ಹಾಟ್​ ಲುಕ್​ನಿಂದಲೇ ಎಲ್ಲರ ಕಣ್ಮನ ಸೆಳೆಯುತ್ತಿರುವ ಮಲೈಕಾ ಅರೋರಾ (Malaika Arora) ಸದ್ಯ ಬಿಟೌನ್​ನಲ್ಲಿ ಒಂದಲ್ಲ ಒಂದು ವಿಷಯದಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಕಳೆದ ಬಾರಿ ತಮ್ಮ ಪ್ರಿಯಕರ ನಟ ಅರ್ಜುನ್ ಕಪೂರ್​ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೆಲ್ಲಾ ಮೀರಿ ಹೊರಬಂದ ನಟಿ ಇದೀಗ ಮತ್ತೊಮ್ಮೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದು, ಬ್ರೇಕಪ್​ ವಿಷಯಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

ಬಾಲಿವುಡ್​ನ ಫ್ಯಾಶನ್​ ಐಕಾನ್ ಎಂದೇ ಕರೆಯಲ್ಪಡುವ ಮಲೈಕಾ ಅರೋರಾ, ತನ್ನ ವಿರುದ್ಧ ಕೇಳಿಬರುವ ನೆಗಟಿವ್ ಸುದ್ದಿ, ಟ್ರೋಲ್​, ಟೀಕೆಗಳು ಹಾಗೂ ಅರ್ಜುನ್​ ಕಪೂರ್​ ಜತೆಗಿನ ಬ್ರೇಕ್​ಅಪ್​ ಬಗ್ಗೆ ಕಡೆಗೂ ಮೌನಮುರಿದಿದ್ದು, “ನಾನು ಯಾವುದೇ ವಿಷಾದವಿಲ್ಲದೆ ಬದಕುತ್ತೇನೆ ಹೊರತು ಕೊರಗುವುದಿಲ್ಲ. ಇಂದು ಏನಾದರೂ ಕಲಿತಿದ್ದೀನಿ ಎಂದಾದರೆ ಅದಕ್ಕೆ ಈ ಜೀವನದುದ್ದಕ್ಕೂ ನಾನು ಪಡೆದ ಅನುಭವಗಳೇ ಕಾರಣ. ಇದೆಲ್ಲದರಿಂದಲೇ ಇಂದು ಒಂದೊಳ್ಳೆ ಜೀವನವನ್ನು ರೂಪಿಸಿಕೊಂಡಿದ್ದೇನೆ" ಎಂದು ಹೇಳಿದರು.

ಯಾವುದೇ ಪಶ್ಚಾತ್ತಾಪ ಇಲ್ಲ

ಇತ್ತೀಚೆಗೆ ತನ್ನ ತಂದೆ ಅನಿಲ್ ಮೆಹ್ತಾರನ್ನು ಕಳೆದುಕೊಂಡ ಮಲೈಕಾ ಅರೋರಾ, "ನನ್ನ ಜೀವನದಲ್ಲಿ ಸ್ನೇಹಿತರು, ಕುಟುಂಬ ಮತ್ತು ವೃತ್ತಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕರೀನಾ ಕಪೂರ್ ಖಾನ್, ಕರಿಷ್ಮಾ ಕಪೂರ್ ಮತ್ತು ಸಹೋದರಿ ಅಮೃತಾ ಅರೋರಾ ಒಳಗೊಂಡ ನನ್ನ ಗರ್ಲ್ ಗ್ಯಾಂಗ್ ಇಲ್ಲದೆ, ನಾನೇನು ಮಾಡಲು ಸಾಧ್ಯವಿಲ್ಲ. ಇಲ್ಲಿಯವರೆಗೂ ನಾನು ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಮಾಡಿದ ಪ್ರತಿಯೊಂದು ಆಯ್ಕೆಯು ಒಂದಲ್ಲ ಒಂದು ರೀತಿ ನನ್ನ ಜೀವನವನ್ನು ಉತ್ತಮವಾಗಿ ರೂಪಿಸಿದೆ ಎಂದೇ ನಾನು ನಂಬಿದ್ದೇನೆ. ಈ ವಿಷಯದಲ್ಲಿ ನನಗೆ ಯಾವುದೇ ಪಶ್ಚಾತ್ತಾಪ ಇಲ್ಲ" ಎಂದು ಟೀಕಾಕಾರರಿಗೆ ಖಡಕ್ ಆಗಿ ಉತ್ತರಿಸಿದ್ದಾರೆ,(ಏಜೆನ್ಸೀಸ್).