ನ್ಯೂಸ್

ಮುಖದ ಕಾಂತಿಯನ್ನು ಹೆಚ್ಚಿಸಲು ಮನೆಯಲ್ಲಿಯೇ ಸುಲಭವಾಗಿ ಮಾಡಿ ಫೇಸ್​ ಮಾಸ್ಕ್​..| Beauty tips

Beauty tips : ಇಂದಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದ ವೃದ್ಯಾಪ್ಯ ವಯಸ್ಸಿನವರೆಗೂ ಎಲ್ಲರೂ ತಮ್ಮ ತ್ವಚೆಯ ಕಾಂತಿಯನ್ನು ಉಪಯುಕ್ತವಾಗಿ ಬಳಸಲು ಅನೇಕ ರೀತಿಯ ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅಂದರೆ, ಪಾರ್ಲರ್​ಗಳಿಗೆ ಹೋಗುವುದು, ಅನೇಕ ರೀತಿಯ ಪ್ಯಾಕ್​ಗಳನ್ನು ಮುಖಕ್ಕೆ ಹಾಕಿಕೊಳ್ಳುವುದನ್ನು ಮಾಡುತ್ತಾರೆ. ಅವು ಕೆಲವೊಬ್ಬರ ಮುಖಕ್ಕೆ ಹೊಂದಿಕೊಳ್ಳಬಹುದು ಇಲ್ಲವೇ ಹೊಂದಿಕೊಳ್ಳದೇ ಇರಬಹುದು. ಆದರಿಂದ ಯಾರು ತಮ್ಮ ಮುಖದ ಕಾಂತಿಯನ್ನು ಹೆಚ್ಚು ಕಾಲ ಚೆನ್ನಾಗಿರಲು ಬಯಸುತ್ತರೋ ಅವರು ನಿಮ್ಮ ಮನೆಗಳಲ್ಲಿಯೇ ಈ ರೀತಿಯ ನೈಸರ್ಗಿಕ ಫೇಸ್​ ಪ್ಯಾಕ್​ ಮಾಡಿ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿಯು ಆಕರ್ಷಣೆಯಾಗಿ ಕಾಣುತ್ತದೆ.

* ನಿಂಬೆ ಫೇಸ್ ಮಾಸ್ಕ್

1 ಚಮಚ ಜೇನು ತುಪ್ಪ ಹಾಗೂ 1 ಚಮಚ ನಿಂಬೆ ರಸವನ್ನು ಬೆರೆಸಿ, ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ತೊಳೆಯಿರಿ. ಇದು ಚರ್ಮವನ್ನು ಹೊಳಪುಗೊಳಿಸುತ್ತದೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ.

* ಆಲೂಗಡ್ಡೆ ಫೇಸ್ ಮಾಸ್ಕ್

ಒಂದು ಆಲೂಗಡ್ಡೆಯನ್ನು ತುರಿದು ಅದರ ರಸವನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳನ್ನು ಬಿಟ್ಟು ನಂತರ ತಣ್ಣಿರಿನಿಮದ ತೊಳೆಯಿರಿ ಇದರಿಂದ ಕಪ್ಪು ಕಲೆಗಳು ದೂರವಾಗಿ, ಚರ್ಮವನ್ನು ತಿಳಿಯಾಗಿಸುತ್ತದೆ.

* ಬಾದಾಮಿ ಹಾಗೂ ಹಾಲಿನ ಪೇಸ್ಟ್

ರಾತ್ರಿ 4-5 ಬಾದಾಮಿಗಳನ್ನು ನೆನೆಯಲು ಬಿಟ್ಟು ಬೆಳಿಗ್ಗೆ ಸಿಪ್ಪೆ ಸುಲಿದು ಅದಕ್ಕೆ ಹಾಳು ಹಾಕಿ ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ ಇದರಿಂದ ನಿಮ್ಮ ಮುಖದ ಚರ್ಮ ಮೃದುವಾಗಿ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

* ಅರಿಶಿಣ ಮತ್ತು ಮೊಸರು

1 ಚಮಚ ಮೊಸರಿಗೆ ಚಿಟಿಕೆ ಅರಿಶಿಣ ಪುಡಿಯನ್ನು ಸೇರಿಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ ಇದು ಚರ್ಮದ ಬಣ್ಣವನ್ನು ಸಮಗೊಳಿಸುತ್ತದೆ.

* ಟೊಮೆಟೊ ರಸ

ಟೊಮಟೋ ತುಂಡುಗಳನ್ನು ತೆಗೆದುಕೊಂಡು ಅದನ್ನು ಮುಖದ ಮೇಲೆ ಉಜ್ಜಿ 10-15 ನಿಮಿಷಗಳನ್ನು ಬಿಟ್ಟು ತೊಳೆಯಿರಿ ಇದರಿಂದ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.

* ದಿನಕ್ಕೆ 3-4 ಲೀಟರ್​ ನೀರು ಕುಡಿಯುವುದು ಹಾಗೆ, ಅದರ ಜೊತೆಗೆ ಹಣ್ಣುಗಳು, ತರಕಾರಿಗಳನ್ನು ಸೇವಿಸುವುದರಿಂದ ಚರ್ಮವು ಸದೃಢವಾಗಿರುತ್ತದೆ.

(ಏಜೆನ್ಸೀಸ್​)